ದೇಶ-ಪ್ರಪಂಚ

ಎಣ್ಣೆ ಪ್ರಿಯರಿಗೆ ಶಾಕಿಂಗ್ ನ್ಯೂಸ್‌ ನೀಡಿದ ಸಿದ್ದು ಬಜೆಟ್‌..!ಮದ್ಯ ಬೆಲೆಯಲ್ಲಿ ಮತ್ತೆ ಏರಿಕೆ..!

ನ್ಯೂಸ್ ನಾಟೌಟ್‌ :ವಿಧಾನಸಭೆಯಲ್ಲಿಂದು ಸಿಎಂ ಸಿದ್ದರಾಮಯ್ಯ (Siddaramaiah) ಸಂಪೂರ್ಣ ಬಜೆಟ್ (Karnataka Budget 2024) ಮಂಡಿಸುತ್ತಿದ್ದಾರೆ.ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 15ನೇ ಬಜೆಟ್ ಇದಾಗಿದ್ದು,ವಿಶೇಷವಾಗಿ ರಾಜ್ಯದಲ್ಲಿ ಈ ಬಾರಿ ತೀವ್ರ ಬರ ತಲೆತೋರಿದೆ. ರೈತರಿಗೆ ಸಿದ್ದರಾಮಯ್ಯ ನೆರವಾಗುವ ನಿರೀಕ್ಷೆ ಇದ್ದು,ಮದ್ಯ ಪ್ರಿಯರಿಗೆ ಸಿದ್ದು ಸರ್ಕಾರದಿಂದ ಶಾಕಿಂಗ್ ನ್ಯೂಸ್‌ ಎಂದೇ ಹೇಳಬಹುದು.

ಕೆಲ ದಿನಗಳ ಹಿಂದೆಯಷ್ಟೇ ಬಿಯರ್ ಬೆಲೆ ಹೆಚ್ಚಿಸಿದ್ದ ಸರ್ಕಾರ ಇದೀಗ ಮತ್ತೆ ಬೆಲೆ ಹೆಚ್ಚಳ ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಬಿಯರ್‌ ಸ್ಲ್ಯಾಬ್‌ ದರ ಪರಿಷ್ಕರಣೆ ಮಾಡಲಾಗಿದೆ. ಬಿಯರ್ ಸೇರಿ ಎಲ್ಲಾ ಬ್ರ್ಯಾಂಡ್ ಗಳ ಬೆಲೆ ಹೆಚ್ಚಳ ಮಾಡಲಾಗಿದೆ. ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IMl ಬಿಯರ್ ಸ್ಲಾಬ್ ಪರಿಷ್ಕರಣೆ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸುವ ವೇಳೆ ಪ್ರತಿಪಕ್ಷಗಳು ಗಲಾಟೆ ಆರಂಭಿಸಿವೆ. ವಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಸಿದ್ದರಾಮಯ್ಯ ಅವರ ಕೇಂದ್ರದ ವಿರುದ್ಧದ ಆರೋಪಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಲಾಟೆಯ ಮಧ್ಯೆಯೇ ಸಿದ್ದರಾಮಯ್ಯ ಅವರು ಬಜೆಟ್‌ ಭಾಷಣ ಮುಂದುವರಿಸಿದ್ದಾರೆ.

Related posts

70 ವರ್ಷದ ಅಂಧ ಮಹಿಳೆ ಮೇಲೆ ಅತ್ಯಾಚಾರ! ಇಲ್ಲಿದೆ ಆ ಭೂ ಮಾಲಿಕನ ಅಮಾನವೀಯ ಕೃತ್ಯದ ವಿವರ!

ಮತದಾನ ವೇಳೆ ಗುಂಡಿನ ದಾಳಿ, ಇವಿಎಂಗಳು ಪುಡಿ-ಪುಡಿ..! 11 ಮತಗಟ್ಟೆಗಳಲ್ಲಿ ಮರು ಮತದಾನ

ಯಾತ್ರಿಕರ ಬಸ್ ಮೇಲೆ ಉಗ್ರರ ದಾಳಿ, 10 ಮಂದಿ ಸಾವು..! ರಾಷ್ಟ್ರಪತಿ ಭವನದಲ್ಲಿ ಮೋದಿ ಪ್ರಮಾಣವಚನ ನಡೆಯುತ್ತಿದ್ದ ವೇಳೆ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ..!