ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಅಂಪೈರ್ ತೀರ್ಪಿನಿಂದ ಫುಟ್‌ ಬಾಲ್ ಮೈದಾನದಲ್ಲೇ ಹೊಡೆದಾಟ..! 100 ಮಂದಿ ಸಾವು..!

238

ನ್ಯೂಸ್ ನಾಟೌಟ್: ಫುಟ್‌ಬಾಲ್ ಪಂದ್ಯವೊಂದರ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸಿದ ಕಾರಣ 100 ಕ್ಕೂ ಹೆಚ್ಚು ಮಂದಿ ಭೀಕರವಾಗಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಆಪ್ರಿಕಾದ ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್‌ ಜೆರೆಕೋರ್‌ ನಲ್ಲಿ ನಡೆದಿದೆ.

ಭಾನುವಾರ(ಡಿ.1) ಈ ಘಟನೆ ಸಂಭವಿಸಿದ್ದು, ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸಿದ ನಂತರ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಶವಗಳು ಸಾಲುಗಟ್ಟಿ ಇಡಲಾಗಿದೆ.

ಫುಟ್‌ ಬಾಲ್ ಪಂದ್ಯದ ವೇಳೆ ರೆಫರಿ ನೀಡಿದ ವಿವಾದಿತ ತೀರ್ಪಿನಿಂದ ಘರ್ಷಣೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದ್ದು, ರೊಚ್ಚಿಗೆದ್ದ ಅಭಿಮಾನಿಗಳಿಂದ ಘರ್ಷಣೆ ನಡೆದಿದೆ. 2021 ರ ದಂಗೆಯಲ್ಲಿ ಅಧಿಕಾರಕ್ಕೆ ಬಂದ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಆಯೋಜಿಸಲಾದ ಪಂದ್ಯಾವಳಿ ಸಮಯದಲ್ಲಿ ಈ ಘರ್ಷಣೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವೈದ್ಯರೊಬ್ಬರು, ಆಸ್ಪತ್ರೆಯಲ್ಲಿ ಕಣ್ಣು ಹಾಯಿಸಿದಷ್ಟು ದೂರದಲ್ಲಿ ಶವಗಳ ಸಾಲುಗಳಿವೆ. ಇತರ ದೇಹಗಳು ಹಜಾರದಲ್ಲಿ ನೆಲದ ಮೇಲೆ ಬಿದ್ದಿವೆ, ಶವಾಗಾರ ತುಂಬಿದೆ. ಸುಮಾರು 100ಕ್ಕೂ ಮಂದಿ ಸತ್ತಿದ್ದಾರೆ ಎಂದು ಹೇಳಿದ್ದಾರೆ.
ಅಂದಹಾಗೆ ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ ಇಂತಹ ಪಂದ್ಯಾವಳಿಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಆದರೆ ಇವು ತೀವ್ರ ಚರ್ಚೆಗೆ ಕಾರಣವಾಗಿದೆ.

Click

https://newsnotout.com/2024/12/bath-towel-kannada-news-video-viral-news-video/
https://newsnotout.com/2024/12/baloon-kannada-news-7th-student-nomore-13-year-old/
https://newsnotout.com/2024/12/kananda-news-passport-verification-kannada-news-news/
https://newsnotout.com/2024/12/bjp-show-cause-notice-to-yathnal-kannada-news-vijayendra/
https://newsnotout.com/2024/12/hospital-bed-kannada-news-photo-viral-kannada-news-dec-3/
See also  ಮಕ್ಕಳ ಮೇಲೆ ಕುಸಿದು ಬಿದ್ದ ಅಂಗನವಾಡಿಯ ಛಾವಣಿ..! ಮಕ್ಕಳು ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget