ದೇಶ-ವಿದೇಶವಿಡಿಯೋವೈರಲ್ ನ್ಯೂಸ್ಸಿನಿಮಾ

ಉಮಾಪತಿ, ಪ್ರಥಮ್‍ ಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಅರೆಸ್ಟ್..! ವಿಡಿಯೋ ಮಾಡಿ ಕ್ಷಮೆ ಕೇಳಿದ ಅಂಧಾಭಿಮಾನಿ..! ಬೆದರಿಕೆ ಹಾಕಿದ ಎಲ್ಲರ ವಿರುದ್ಧ ಕ್ರಮಕ್ಕೆ ಪೊಲೀಸರ ಸಿದ್ಧತೆ..!

241

ನ್ಯೂಸ್‌ ನಾಟೌಟ್‌: ನಟ ದರ್ಶನ್ (Challenging Star Darshan) ಹಾಗೂ ಗ್ಯಾಂಗ್‍ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ಕೆಲ ಅಭಿಮಾನಿಗಳು ಮಾಧ್ಯಮಗಳೂ ಸೇರಿದಂತೆ ದರ್ಶನ್ ವಿಚಾರದಲ್ಲಿ ನ್ಯಾಯದ ಪರ ಮಾತನಾಡಿದ ಹಲವರಿಗೆ ಬೆದರಿಕೆ ಹಾಕಿದ್ದರು. ಇದೀಗ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಯಂಬತ್ತೂರಿನಿಂದ ದರ್ಶನ್ ಅಭಿಮಾನಿ ಚೇತನ್ ನನ್ನು ಪೊಲೀಸರು ಎಳೆದು ತಂದಿದ್ದಾರೆ. ಜೊತೆಗೆ ಮತ್ತೊಬ್ಬ ಅಭಿಮಾನಿ ನಾಗೇಶ್ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೆದರಿಕೆ ಹಾಕಿದ ಅಭಿಮಾನಿಗಳ ಮೇಲೆ ಕೇಸ್ ದಾಖಲು ಮಾಡಲಾಗಿದೆ.

ಬಸವೇಶ್ವರ ನಗರ ಠಾಣೆಯಲ್ಲಿ ಕೋರ್ಟ್ ಸೂಚನೆಯಂತೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಅರೆಸ್ಟ್ ಆಗ್ತಿದ್ದಂತೆ ಉಮಾಪತಿ ಗೌಡ ಹಾಗೂ ಪ್ರಥಮ್ ಗೆ ಚೇತನ್ ಕ್ಷಮೆ ಕೇಳಿದ್ದಾನೆ. ಕಾನೂನು ಬದ್ಧವಾಗಿ ನಡೆದುಕೊಳ್ತೀನಿ ಕ್ಷಮಿಸಿ ಅಂತಾ ವೀಡಿಯೋ ಮಾಡಿ ಹಾಕಿದ್ದಾನೆ. ಇದೀಗ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

Click 👇

https://newsnotout.com/2024/06/sanatana-darma-kannada-news-bengaluru-udayanidhi-stalin
See also  ಜನವಸತಿ ಪ್ರದೇಶದಲ್ಲಿ ಪತನಗೊಂಡ ವಿಮಾನ, 61 ಮಂದಿ ಸಾವು..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget