ಪುತ್ತೂರು

ಕಾಣೆಯಾಗಿದ್ದ ಉಳ್ಳಾಲ ಯುವಕನ ಮೃತದೇಹ ಪತ್ತೆ

271
Spread the love

ಮಂಗಳೂರು: ಉಳ್ಳಾಲದಿಂದ  ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಹಪೀಝ್ ಎಂಬವರ ಮೃತದೇಹ ಪತ್ತೆಯಾಗಿದೆ. ಇಂದು ಬೆಳಗ್ಗೆ ಕೋಟೆಪುರ – ಬೆಂಗ್ರೆಯ ಅಳಿವೆ ಬಾಗಿಲಿನಲ್ಲಿ ಪತ್ತೆಯಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹಫೀಝ್ ಶುಕ್ರವಾರದಂದು ಬೈಕ್ ನಲ್ಲಿ ತೆರಳಿದ್ದರು. ಸಂಜೆ ವೇಳೆ ಮನೆಗೆ ಬರುತ್ತಿದ್ದ ಅವರು ಮನೆಗೆ ಮರಳಿ ಬಾರದೇ ಇದ್ದುದರಿಂದ ಮನೆ ಮಂದಿ ಹುಡುಕಾಟ ಶುರು ಮಾಡಿದರು.ಆದರೆ ಶನಿವಾರ ಬೆಳಗ್ಗೆ ವೇಳೆ ನೇತ್ರಾವತಿ ಸೇತುವೆ ಬಳಿ ಹಫೀಝ್ ನ ಚಪ್ಪಲಿ, ಬೈಕ್ ಹಾಗೂ ಮೊಬೈಲ್ ಕೂಡ ಪತ್ತೆಯಾಗಿತ್ತು. ಇದರ ಆಧಾರದನ್ವಯ ಉಳ್ಳಾಲ ಪೊಲೀಸರು , ಸ್ಥಳೀಯ ಮೀನುಗಾರರು , ಅಗ್ನಿಶಾಮಕದಳದವರು  ತೀವ್ರ ಶೋಧ ಕಾರ್ಯಚರಣೆ ಮುಂದುವರಿಸಿದರು.ಇಂದು ಬೆಳಗ್ಗೆ ಹಪೀಝ್ ಎಂಬವರ ಮೃತದೇಹ ಪತ್ತೆಯಾಗಿದೆ

See also  'ವಸ್ತ್ರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಟೋಕನ್ ವ್ಯವಸ್ಥೆ ಇರಲ್ಲ' ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರಕಟಣೆ
  Ad Widget   Ad Widget   Ad Widget