ಕರಾವಳಿಕ್ರೈಂ

ಗೃಹಪ್ರವೇಶವಾಗಿ ಐದೇ ದಿನದಲ್ಲಿ ಹೊಸಮನೆಯಲ್ಲೇ ನೇಣಿಗೆ ಶರಣಾದ ಯುವತಿ..!, ಬ್ಯಾಂಕ್‌ ಸಾಲ ಪಡೆದು ಖರೀದಿಸಿದ ಮನೆಯಲ್ಲೇ ದುರಂತ ಅಂತ್ಯ

ನ್ಯೂಸ್‌ ನಾಟೌಟ್‌: ಜೀವನದಲ್ಲಿ ಹಲವಾರು ಕನಸುಗಳನ್ನು ಕಟ್ಟಿ ಬಾಳಿ ಬದುಕುಬೇಕಾದ ಯುವತಿಯೋರ್ವಳು ತಾನೇ ಖರೀದಿಸಿದ ಹೊಸ ಮನೆಯಲ್ಲಿ ಗೃಹಪ್ರವೇಶವಾಗಿ ಐದೇ ದಿನದಲ್ಲಿ ಮನೆಯ ಕೋಣೆಯೊಂದರಲ್ಲಿ ನೇಣಿಗೆ ಶರಣಾಗಿರುವ ಘಟನೆ ಮಂಗಳೂರು ಉಳ್ಳಾಲ ಸಮೀಪದ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ.

ಮೃತ ಯುವತಿಯನ್ನು ಮೂಲತಃ ಫರಂಗಿಪೇಟೆಯ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿಯಾಗಿದ್ದ ಅಶ್ವಿನಿ ಬಂಗೇರ(25) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಮುನ್ನ ರಾತ್ರಿ ಅಶ್ವಿನಿ ತನ್ನ ಸ್ನೇಹಿತೆ ಜತೆ ಚಾಟ್ ಮಾಡಿದ್ದಳು. ಬೆಳಗ್ಗೆ ನೋಡಿದಾಗ ಕೋಣೆಯಲ್ಲಿ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದು ಬೆಳಕಿಗೆ ಬಂದಿದೆ.

ಮೃತದೇಹದ ಬಳಿ ಅಶ್ವಿನಿ ಬರೆದ ಡೆತ್ ನೋಟ್‌ ದೊರೆತಿದೆ ಎನ್ನಲಾಗಿದೆ. ಡೆತ್ ನೋಟಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿದ್ದು, ಬ್ಯಾಂಕ್‌ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಸಾಮಾನ್ಯ ಕುಟುಂಬದಲ್ಲಿ ಬೆಳೆದು ಬಂದ ಅಶ್ವಿನಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕಳೆದ ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದರು. ಕುಂಪಲದ ಚಿತ್ರಾಂಜಲಿ ನಗರದಲ್ಲಿ ಸಂಗೀತಾ ಎಂಬವರಿಂದ ಅಶ್ವಿನಿಯೇ ಮನೆಯೊಂದನ್ನ ಖರೀದಿಸಿ ಜೂ.3 ರಂದು ಗೃಹ ಪ್ರವೇಶ ಮಾಡಿ ತಾಯಿ ದೇವಕಿ, ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದರು. ಡೆತ್‌ನೋಟ್‌ನಲ್ಲಿ ತನ್ನ ಪ್ರಿಯಕರನ ಹೆಸರು ಉಲ್ಲೇಖಿಸಿ ಐ ಲವ್ ಯೂ ಅಂತ ಬರದಿದ್ದು, ತಾನು ಬಳಸುತ್ತಿದ್ದ ಐ ಫೋನನ್ನು ಆತನಿಗೆ ನೀಡಬೇಕೆಂದು ಹೇಳಿದ್ದಾಳೆ.

ಅಶ್ವಿನ ಅವರ ಮೃತದೇಹವನ್ನ ಪೊಲೀಸರು ಮರಣೋತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಗಳ ಮೃತದೇಹ ಕಂಡು ಹೆತ್ತ ತಾಯಿ ಮನೆಯೊಳಗಡೆ ಬಿದ್ದು ಹೊರಳಾಡುತ್ತಿರುವ ದೃಶ್ಯ ಮನಕಲಕುವಂತಿತ್ತು. ಬ್ಯಾಂಕ್ ಸಾಲದಿಂದ ಅಶ್ವಿನಿ ಖಿನ್ನತೆಗೊಳಗಾಗಿ, ಆತ್ಮ ಹತ್ಯೆಗೆದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

Related posts

ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ ಎಂ.ಟೆಕ್‌ ಪದವೀಧರೆ, ವಿಡಿಯೋ ವೈರಲ್..!

ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಅಡ್ಡ ಬಂದ ಜಿಂಕೆ..!ಜಿಂಕೆ ತಪ್ಪಿಸಲು ಹೋಗಿ ಕಾರು ಅಪಘಾತ,ಮೂವರು ಗಂಭೀರ

ಸುಳ್ಯ: ಕ್ಷುಲ್ಲಕ ವಿಚಾರಕ್ಕೆ ಜಗಳ,ವ್ಯಕ್ತಿಗೆ ತಲವಾರಿನಿಂದ ಹಲ್ಲೆಗೆ ಯತ್ನ