Latestಕರಾವಳಿಕ್ರೈಂ

ಉಳ್ಳಾಲ ಬಾಲಕಿಯ ಅಪಹರಣ ಪ್ರಕರಣ, ಮೂವರು ಆರೋಪಿಗಳ ಬಂಧನ

409

ನ್ಯೂಸ್‌ ನಾಟೌಟ್‌: ಬಾಲಕಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿ ಮತ್ತು ಆತನಿಗೆ ಸಹಕರಿಸಿದ ಆರೋಪದಲ್ಲಿ ದಂಪತಿಯನ್ನು ಬಂಧಿಸಿದ್ದಾರೆ.

16 ವಯಸ್ಸಿನ ಮಗಳು ಮನೆಯಿಂದ ಹೊರ ಹೋದವಳು ನಂತನ ನಾಪತ್ತೆಯಾಗಿದ್ದು, ಆಕೆಯನ್ನು ಅಪಹರಿಸಿರುವುದಾಗಿ ಬಾಲಕಿಯ ತಂದೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು.

ಈ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಉಳ್ಳಾಲ ಪೊಲೀಸರು ಬಾಲಕಿಯನ್ನು ಅಪಹರಿಸಿದ ಆರೋಪಿ ದೇರಳಕಟ್ಟೆ ಸಮೀಪದ ರೆಂಜಾಡಿ ನಿವಾಸಿ ಶಹಬಾಝ್ (27) ಹಾಗೂ ಆತನಿಗೆ ಸಹಕರಿಸಿದ ಕೊಣಾಜೆ ನಿವಾಸಿಗಳಾದ ಅಮೀರ್ ಸೊಹೈಲ್, ನಿಶಾ ದಂಪತಿಯನ್ನು ಬಂಧಿಸಿದ್ದಾರೆ. ಜುಲೈ 5 ರಂದು ಸಂಜೆ 4 ಗಂಟೆಗೆ ಉಳ್ಳಾಲ ಠಾಣಾ ವ್ಯಾಪ್ತಿಯ ಬಾಡಿಗೆಯ ಮನೆಯಲ್ಲಿ ನೆಲೆಸಿದ್ದ‌ ಬಾಲಕಿ ಮನೆಯಿಂದ ಹೊರ ಹೋದವಳು ಹಿಂತಿರುಗಿರಲಿಲ್ಲ. ಈ ಬಗ್ಗೆ ಬಾಲಕಿಯ ತಂದೆ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಬಾಲಕಿ ಮತ್ತು ಆಕೆಯನ್ನು ಅಪಹರಿಸಿದ್ದ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

See also  ದುಗ್ಗಲಡ್ಕ: 32 ವರ್ಷದ ಯುವಕ ಹಠಾತ್ ನಾಪತ್ತೆ, ಮನೆಯವರಿಂದ ತೀವ್ರ ಹುಡುಕಾಟ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget