ಕ್ರೈಂ

ಉಜಿರೆ: ಕುಸಿದು ಬಿದ್ದು ಕಾಲೇಜಿನ ವಾಚ್ ಮ್ಯಾನ್‌ ಸಾವು

ಉಜಿರೆ: ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ 15 ವರ್ಷಗಳಿಂದ ವಾಚ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಲ್ಮಂಜ ಗ್ರಾಮದ ಪಜಿರಡ್ಕ ನಿವಾಸಿ ಹೂವಯ್ಯ ಗೌಡ(55) ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಹೂವಯ್ಯ ಗೌಡ ಸುಮಾರು 6 ತಿಂಗಳುಗಳಿಂದ ಬಿಪಿ, ಶುಗರ್, ಕಾಯಿಲೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು. ಆದರೆ ಎ.15 ರಂದು ಎಂದಿನಂತೆ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನಲ್ಲಿ ವಾಚ್ ಮ್ಯಾನ್ ಕರ್ತವ್ಯ ಮಾಡುತ್ತಿರುವ ವೇಳೆ ತಲೆಸುತ್ತು ಬಂದು ಕುಸಿದು ಬಿದ್ದಿದ್ದರು. ಬಿದ್ದಿದ್ದ ಅವರನ್ನು ರಾಜಾರಾಮ ಮತ್ತು ರಾಹುಲ್ ಎಂಬ ವಿದ್ಯಾರ್ಥಿಗಳು ಕೂಡಲೇ ಚಿಕಿತ್ಸೆಗಾಗಿ ಎಸ್.ಡಿ.ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಹೂವಯ್ಯ ಗೌಡ ರವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹೂವಯ್ಯ ಗೌಡರ ಪುತ್ರಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

ಕೇರಳದ ನ್ಯಾಯಾಧೀಶರ ಎದುರು ಸುಳ್ಯದ ವೈದ್ಯೆಯ ಉದ್ದಟತನ..!, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ನ್ಯಾಯಾಧೀಶ, ಪ್ರಕರಣ ದಾಖಲು

ಬಿಜೆಪಿ ಮುಖಂಡನ ಮನೆಯಲ್ಲಿ ಮಿಲಿಟರಿ ಮದ್ಯ ಪತ್ತೆ..! ಲಕ್ಷಾಂತರ ರೂಪಾಯಿ ಮಧ್ಯ ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು

ಆಸ್ಪತ್ರೆ ಬೆಡ್ ನಲ್ಲಿರುವ ಆರೋಪಿ ದರ್ಶನ್‌ ಫೋಟೋ ವೈರಲ್‌, ನಾಳೆ(ಡಿ.3) ಮತ್ತೆ ಜಾಮೀನು ಅರ್ಜಿ ವಿಚಾರಣೆ..!