ವೈರಲ್ ನ್ಯೂಸ್ಸಿನಿಮಾ

ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾ..! ಯಾವುದರಲ್ಲಿ..? ಯಾವಾಗ..?

218

ನ್ಯೂಸ್ ನಾಟೌಟ್: ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಡಿಸೆಂಬರ್ 20 ರಂದು ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಲೆವೆಲ್ ​ನಲ್ಲಿ ತೆರೆಗೆ ಬಂದಿದೆ. ಕನ್ನಡ ಮಾತ್ರವೇ ಅಲ್ಲದೆ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಿದೆ. ಇದೀಗ ‘ಯುಐ’ ಸಿನಿಮಾ ಒಟಿಟಿಗೆ ಬರುತ್ತಿದ್ದು, ‘ಯುಐ’ ಸಿನಿಮಾ ಸನ್ ನೆಕ್ಟ್ಸ್ ಒಟಿಟಿಯಲ್ಲಿ ತೆರೆಗೆ ಬರಲಿದೆ ಎಂದು ವರದಿಯಾಗಿದೆ.

ಸನ್ ನೆಕ್ಸ್ಟ್​, ‘ಯುಐ’ ಸಿನಿಮಾ ಸ್ಟ್ರೀಮ್ ಮಾಡುತ್ತಿರುವ ಬಗ್ಗೆ ಯಾವುದೇ ಸೋಷಿಯಲ್ ಮೀಡಿಯಾ ಪೋಸ್ಟ್​ಗಳನ್ನು ಹಂಚಿಕೊಂಡಿಲ್ಲವಾದರೂ ‘ಯುಐ’ ಸಿನಿಮಾ ಸನ್ ನೆಕ್ಟ್ಸ್ ನಲ್ಲಿ ಕೆಲವೇ ದಿನಗಳಲ್ಲಿ ಸ್ಟ್ರೀಂ ಆಗಲಿದೆ ಎಂಬ ಸುದ್ದಿಗಳು ಈಗಾಗಲೇ ಪ್ರಕಟವಾಗಿವೆ. ಉಪೇಂದ್ರ ನಟನೆಯ ‘ಮುಕುಂದ ಮುರಾರಿ’ ಸಹ ಸನ್ ನೆಕ್ಟ್ಸ್​ನಲ್ಲಿ ವೀಕ್ಷಣೆಗೆ ಈಗಾಗಲೇ ಲಭ್ಯವಿದೆ. ಇದೀಗ ‘ಯುಐ’ ಸಿನಿಮಾ ಸಹ ಸನ್ ನೆಕ್ಸ್ಟ್​ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಸನ್ ನೆಕ್ಸ್ಟ್​, ತೆಲುಗು ಹಾಗೂ ತಮಿಳು ಪ್ರೇಕ್ಷಕರಿಗೆ ಮೆಚ್ಚಿನ ಒಟಿಟಿ ಆಗಿದ್ದು, ತಮಿಳು ಹಾಗೂ ತೆಲುಗಿನ ಹಲವು ಉತ್ತಮ ಸಿನಿಮಾಗಳು ಈ ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಹಿಂದಿ ಮತ್ತು ಇಂಗ್ಲೀಷ್ ಸಿನಿಮಾಗಳು ಸಹ ಈ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿವೆ. ಇನ್ನು ‘ಯುಐ’ ಸನ್ ನೆಕ್ಟ್ಸ್ ಯಾವ ದಿನಾಂಕದಂದು ಬಿಡುಗಡೆ ಆಗಲಿದೆ ಎಂಬ ಬಗ್ಗೆ ಖಾತ್ರಿ ಇಲ್ಲ. ಪ್ರಕಟವಾಗಿರುವ ವರದಿಗಳ ಪ್ರಕಾರ ಇದೇ ತಿಂಗಳ 15ನೇ ತಾರೀಖಿನ ನಂತರ ‘ಯುಐ’ ಸಿನಿಮಾ ಸನ್ ನೆಕ್ಟ್ಸ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ ಎನ್ನಲಾಗುತ್ತಿದೆ.

Click

https://newsnotout.com/2025/01/american-retaired-army-man-become-harm-to-society-s/
https://newsnotout.com/2025/01/police-control-room-kannada-news-student-issue-viral-news/
https://newsnotout.com/2025/01/kannada-news-ksrtc-bus-issue-break-fail-s-matter-d/
https://newsnotout.com/2025/01/yamaha-bike-showroom-kannada-news-more-than-50-bikes-hd/
https://newsnotout.com/2025/01/metro-case-video-issue-man-arrested-kannada-news-d/
See also  ಉಳ್ಳಾಲದ ಯುವತಿ ದುಬೈನಲ್ಲಿ ದುರಂತ ಅಂತ್ಯ..! ಪ್ರತೀ ದಿನ ಕ್ಯಾಬ್ ನಲ್ಲಿ ಹೋಗುತ್ತಿದ್ದವಳು ಅಂದು ತಾನೇ ಕಾರು ಚಲಾಯಿಸಿದ್ದೇಕೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget