ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

UGC-NET ಪರೀಕ್ಷಾ ಅಕ್ರಮ: ಪ್ರತಿಭಟನೆಯ ನಡುವೆಯೇ ಹೊಸ ದಿನಾಂಕ ಘೋಷಣೆ..! ಮರುಪರೀಕ್ಷೆಗೆ ಹಾಜರಾಗ್ತಾರಾ ವಿದ್ಯಾರ್ಥಿಗಳು..?

ನ್ಯೂಸ್ ನಾಟೌಟ್: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಯುಜಿಸಿ-ನೆಟ್‌, ಜಂಟಿ ಸಿಎಸ್‌ಐಆರ್‌ ಯುಜಿಸಿ ನೆಟ್‌, ಎನ್‌ಸಿಇಟಿ ಪರೀಕ್ಷೆಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಹೊಸ ದಿನಾಂಕಗಳನ್ನು ಪ್ರಕಟಿಸಿದೆ. UGC NET ಜೂನ್ 2024 ಪರೀಕ್ಷೆಗಳನ್ನು ಆಗಸ್ಟ್ 21 ಮತ್ತು ಸೆಪ್ಟೆಂಬರ್ 4 ರ ನಡುವೆ ನಡೆಸಲಾಗುವುದು ಎಂದು ಹೇಳಿದೆ.

ಜಂಟಿ CSIR UGC NET ಅನ್ನು ಜುಲೈ 25 ರಿಂದ ಜುಲೈ 27 ರವರೆಗೆ ಮತ್ತು NCET ಪರೀಕ್ಷೆಗಳನ್ನು ಜುಲೈ 10 ರಂದು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (AIAPGET) 2024 ಈಗಾಗಲೇ ನಿಗದಿಪಡಿಸಿದಂತೆ ಜುಲೈ 6ರಂದು ನಡೆಯಲಿದೆ. ಯುಜಿಸಿ-ನೆಟ್ ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿರುತ್ತವೆ.

ಈ ಹಿಂದೆ, ಯುಜಿಸಿ ನೆಟ್ ಜೂನ್ 2024 ಪರೀಕ್ಷೆ ಆಫ್‌ಲೈನ್‌ನಲ್ಲಿ ನಡೆದಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ಮರು ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.

Click

https://newsnotout.com/2024/06/police-issue-kannada-news-police-are-hospitalized-and-accused-ecape

Related posts

ಕೋರ್ಟ್ ನಿಂದ ಭವಾನಿ ರೇವಣ್ಣ ವಿರುದ್ಧ ಬಂಧನ ವಾರಂಟ್‌..! ವಿಚಾರಣೆಗೆ ಮನೆಗೆ ತೆರಳಿದ್ದ ಎಸ್.ಐ.ಟಿ ಅಧಿಕಾರಿಗಳನ್ನು 7 ಗಂಟೆಗೂ ಹೆಚ್ಚು ಕಾಯಿಸಿದ್ದ ಭವಾನಿ..!

‘CM ಸಿದ್ದು ಸರ್ಕಾರದ ನೂರು ದಿನದ ನೊರೆಂಟು ಕರ್ಮಕಾಂಡ’ ವಿಡಿಯೋ ಹಂಚಿಕೊಂಡು ಗೇಲಿ ಮಾಡಿದ ಬಿಜೆಪಿ

ನೌಕಾನೆಲೆ ಬಳಿ GPS ಟ್ರ್ಯಾಕರ್ ಹೊಂದಿದ್ದ ರಣಹದ್ದು ಪತ್ತೆ..! ಬೇಹುಗಾರಿಕೆಗಾಗಿ ಬೇರೆ ದೇಶದಿಂದ ಬಂದಿದೆಯಾ..?