ಕರಾವಳಿ

ಉಡುಪಿ:ತನ್ನ ಜಾಗಕ್ಕೆ ದನಗಳು ಪ್ರವೇಶ ಮಾಡುತ್ತವೆಯೆಂದು ಗುಂಡಿಟ್ಟ ಪ್ರಕರಣ;ವಿ.ಹಿಂ.ಪ. ಬಜರಂಗದಳ ಬೈಂದೂರು ಪ್ರಖಂಡದ ನೇತೃತ್ವದಲ್ಲಿ ಪ್ರತಿಭಟನೆ,ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ,ವಿಡಿಯೋ ಇಲ್ಲಿದೆ..

ನ್ಯೂಸ್ ನಾಟೌಟ್ : ಉಡುಪಿ ಜಿಲ್ಲೆಯ ಕೊಲ್ಲೂರಿನ ಬೆಳ್ಳಾಲ ಸಮೀಪ ನಾಲ್ಕು ದಿನಗಳ ಹಿಂದೆ ಬಂದೂಕಿನಿಂದ ಗುಂಡು ಹಾರಿಸಿದ್ದ ಭೀಕರ ಘಟನೆಯನ್ನು ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಆರೋಪಿ ನರಸಿಂಹ ಕುಲಾಲ್ ನನ್ನು ತಕ್ಷಣ ಬಂಧಿಸಲು ಕೊಲ್ಲೂರು ಪೊಲೀಸ್ ಸ್ಟೇಷನ್ ಗೆ ತೆರಳಿ ಒತ್ತಾಯಿಸಲಾಯಿತು.ಈ ಸಂದರ್ಭ ಠಾಣಾಧಿಕಾರಿಯವರಿಗೆ ಮನವಿಯನ್ನು ನೀಡಲಾಯಿತು.ಗೋವುಗಳನ್ನು ಕಳೆದುಕೊಂಡ ಸಂತ್ರಸ್ಥರ ಮನೆಗಳಿಗೆ ಹೋಗಿ ಅವರಿಗೆ ಧೈರ್ಯ ತುಂಬಲಾಯಿತು.

ತನ್ನ ಜಾಗಕ್ಕೆ ದನಗಳು ಪ್ರವೇಶ ಮಾಡುತ್ತಿವೆ ಎನ್ನುವ ಒಂದೇ ಕಾರಣಕ್ಕೆ ಗೋವುಗಳಿಗೆ ಗುಂಡಿಕ್ಕಿ ಅದರ ಬದುಕನ್ನೇ ಕತ್ತಲಾಗಿಸಿದ ಘಟನೆ ಉಡುಪಿಯಿಂದ ವರದಿಯಾಗಿತ್ತು.ಕಟುಕನೋರ್ವ ಈ ಕೃತ್ಯವೆಸಗಿದ್ದು, ದನ ಕರುಗಳನ್ನು ಗುಂಡಿಟ್ಟು ಬಾರದ ಲೋಕಕ್ಕೆ ಕಳುಹಿಸಿದ್ದಾನೆ.

ಈ ಘಟನೆ ನಡೆದಿದ್ದು ಉಡುಪಿ ಜಿಲ್ಲೆ (Udupi News) ಬೈಂದೂರಿನ ಬೆಳ್ಳಾಲ ಗ್ರಾಮದ ಅಂಗಡಿಜಡ್ಡು ಎಂಬಲ್ಲಿ.ಅಲ್ಲಿ ವಾಸವಾಗಿರುವ ನರಸಿಂಹ ಎಂಬಾತ ನಾಲ್ಕು ಹಸುಗಳನ್ನು ಶಾಶ್ವತವಾಗಿ ಕಣ್ಮುಚ್ಚುವಂತೆ ಮಾಡಿದ್ದಾನೆ. ಅಲ್ಲದೇ ೧೫ ಹಸುಗಳು ಗಂಭೀರ ಗಾಯಗೊಂಡಿವೆ.

ಮಾತು ಬಾರದ ಮೂಕ ಪ್ರಾಣಿಯನ್ನು ಈ ರೀತಿ ಮಾಡಿದ ಪಾಪಿಗೆ ತಕ್ಕ ಶಿಕ್ಷೆಯಾಗಬೇಕು.ಈ ಭಾಗ ಪಶ್ಚಿಮ ಘಟ್ಟದ ತಪ್ಪಲಾಗಿರುವುದರಿಂದ ಕಾಡು ಪ್ರಾಣಿಗಳ ಉಪಟಳ ತಡೆಯಲು ಸರ್ಕಾರ ನಾಡಕೋವಿಗೆ ಪರವಾನಗಿಯನ್ನು ಕೊಡುತ್ತಿದೆ.ಹೀಗಾಗಿ ನರಸಿಂಹ ಎಂಬಾತನಲ್ಲೂ ನಾಡಕೋವಿ ಇದೆ.ಆದರೆ ಇದನ್ನು ಬಡಪಾಯಿ ಪ್ರಾಣಿಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ಉಪ್ಪಿನಂಗಡಿ: ಲಾಟರಿಯಲ್ಲಿ 80 ಲಕ್ಷ ರೂ. ಗೆದ್ದ 72 ವಯಸ್ಸಿನ ವ್ಯಕ್ತಿ,ಆನಂದರವರ ಅದೃಷ್ಟಕ್ಕೆ ‘ಆನಂದ’ ವ್ಯಕ್ತ ಪಡಿಸಿದ ಕುಟುಂಬ ವರ್ಗ

ಕಡಬ: ಅಪ್ರಾಪ್ತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ! ಆರೋಪಿಗಾಗಿ ಶೋಧ!

ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಾಂಕ ಘೋಷಣೆ, ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ