ಕರಾವಳಿ

ಉಡುಪಿ: ಭೀಕರ ರಸ್ತೆ ಅಪಘಾತ,ಬೈಕ್-ಟ್ಯಾಂಕರ್ ಡಿಕ್ಕಿ;ಸವಾರರಿಬ್ಬರು ದುರ್ಮರಣ

ನ್ಯೂಸ್ ನಾಟೌಟ್ : ಉಡುಪಿಯಲ್ಲೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.ಬೈಕ್ಮತ್ತು ಟ್ಯಾಂಕರ್ ಮುಖಾಮುಖಿಯಾಗಿದ್ದು, ಘಟನೆಯು ರಾಷ್ಟ್ರೀಯ ಹೆದ್ದಾರಿ 66 ಉಡುಪಿ ಉಚ್ಚಿಲದಲ್ಲಿ ನಡೆದಿದೆ.

ಮೃತರನ್ನು ಫಲಿಮಾರು ಅವರಾಲುಮಟ್ಟುವಿನ ಅಡ್ಕ ಸುಬ್ರಹ್ಮಣ್ಯ (30) ಮತ್ತು ಗಿರೀಶ್ (26) ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯ ಅವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಗಿರೀಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಉಡುಪಿ ಕಡೆಯಿಂದ ಪಡುಬಿದ್ರೆ ಕಡೆಗೆ ಬೈಕ್ ಸವಾರರಿಬ್ಬರು ಸಂಚರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ವೇಳೆ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಮೂಳೂರಿನ ನರ್ಸರಿ ಬಳಿ ಅಪಘಾತ ಸಂಭವಿಸಿದ್ದು ಬೈಕ್ಗೆ ಟ್ಯಾಂಕರ್ ಢಿಕ್ಕಿ ಹೊಡೆದು ಅದರ ಚಕ್ರದಲ್ಲಿ ಸಿಲುಕಿದ್ದರು ಎನ್ನಲಾಗಿದೆ.ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Related posts

ಅಜ್ಜಾವರ : ಶ್ರೀ ಶಾಸ್ತವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪಾರಾಧನೆ, ಭಕ್ತಾಭಿಮಾನಿಗಳಿಂದ ಸಂಪ್ರದಾಯಬದ್ಧ ಆಚರಣೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ದಿಢೀರ್ ಸ್ಥಗಿತಗೊಂಡ ವಿದ್ಯುತ್‌..! ವಿಮಾನಗಳ ಹಾರಾಟ ಸ್ಥಗಿತ, ಪ್ರಯಾಣಿಕರ ಪರದಾಟ

ಕೊಕ್ಕಡ: ಒಟಿಪಿ ಪಡೆದು ಖಾತೆಯಿಂದ 1.46 ಲಕ್ಷ ರೂ. ವಂಚನೆ..!, ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿಯೇ ವ್ಯವಹರಿಸಿದ ಅಪರಿಚಿತ ವ್ಯಕ್ತಿ ಯಾರು?