ಉಡುಪಿಕರಾವಳಿಕ್ರೈಂವೈರಲ್ ನ್ಯೂಸ್

ಉಡುಪಿ: ರೈಲ್ವೆ ಬೋಗಿಯಲ್ಲಿ ಯುವಕನ ಮೃತದೇಹ ಪತ್ತೆ..! ಈ ಬಗ್ಗೆ ಪೊಲೀಸರು ಹೇಳಿದ್ದೇನು..?

ನ್ಯೂಸ್ ನಾಟೌಟ್: ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಯುವಕನೋರ್ವನ ಮೃತದೇಹ ಶುಕ್ರವಾರ(ಅ.25) ಉಡುಪಿಯ ರೈಲ್ವೆ ಬೋಗಿಯಲ್ಲಿ ಪತ್ತೆಯಾಗಿದ್ದು, ಕೊಲೆ ನಡೆದಿರುವ ಬಗ್ಗೆ ಪ್ರಯಾಣಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರದ ಕುಮಾರಪೇಟೆ ನಿವಾಸಿ ಅಮೀರ್ ಖಾನ್ ಎಂಬುವರ ಪುತ್ರ ಮೌಜಾಮ್(35) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.

ಕೊಲೆಯಾದ ಯುವಕ ಬೆಂಗಳೂರಿನಿಂದ ಮುರ್ಡೇಶ್ವರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅವರ ಕೈಯಲ್ಲಿದ್ದ ಹಣದ ಬ್ಯಾಗ್ ಮತ್ತು ಮೊಬೈಲ್ ಕದಿಯುವ ಉದ್ದೇಶದಿಂದ ದುಷ್ಕರ್ಮಿಗಳು ಯಾವುದೋ ಸಾಧನದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಉಡುಪಿಯ ರೈಲ್ವೆ ಬೋಗಿಯಲ್ಲಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾದ ಮೌಜಾಮ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದು, ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ. ಈ ನಡುವೆ ಮೃತರ ಮೊಬೈಲ್ ಲೊಕೇಶನ್ ಸಕಲೇಶಪುರದಲ್ಲಿ ಕೊನೆಯ ಸಂಪರ್ಕ ಕಂಡುಬಂದಿದ್ದು ತನಿಖೆಯಲ್ಲಿ ಗೊತ್ತಾಗಿದೆ. ಸಕಲೇಶಪುರ ಆಸುಪಾಸಿನಲ್ಲಿ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Click

https://newsnotout.com/2024/10/selfy-kannada-news-elephant-kannada-news-elephant/

Related posts

ಸುಳ್ಯ:ಅಕ್ಕಿ ರುಬ್ಬುತ್ತಿದ್ದಂತೆ ಧಗಧಗನೇ ಹೊತ್ತಿ ಉರಿದ ಗ್ರೈಂಡರ್..!ಕೆಲವೇ ಸೆಕೆಂಡ್‌ನಲ್ಲಿ ಸುಟ್ಟು ಕರಕಲು,ಮನೆಯವರಿಗೆ ಶಾಕ್..!

ಮುಂಬೈ ದಾಳಿಯ ಕರಾಳ ನೆನಪಿಗೆ 16 ವರ್ಷ..! ಹುತಾತ್ಮರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

ರಾಷ್ಟ್ರಪತಿ ಭಾಷಣದ ವೇಳೆ ವಿದ್ಯುತ್ ಕಡಿತ..! ಇಲ್ಲಿದೆ ವಿಡಿಯೋ