Latestಉಡುಪಿಕರಾವಳಿಕ್ರೈಂ

ಉಡುಪಿ: ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಆರೋಪಿ ಕಾರಿಗೆ ಸರಣಿ ಅಪಘಾತ..!ಸಿನಿಮೀಯ ರೀತಿಯಲ್ಲಿ ಆರೋಪಿ ಅರೆಸ್ಟ್..!

395
Pc Cr: PUBLIC TV

ನ್ಯೂಸ್ ನಾಟೌಟ್: ಉಡುಪಿಯ ಮಣಿಪಾಲದಲ್ಲಿ ಸಿನಿಮೀಯ ಶೈಲಿಯಲ್ಲಿ ನಟೋರಿಯಸ್‌ ಕ್ರಿಮಿನಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸರಣಿ ಅಪಘಾತವಾಗಿ ಆರೋಪಿ ಸೆರೆಯಾಗಿದ್ದಾನೆ.

ನಟೋರಿಯಸ್ ಗ್ಯಾಂಗ್‌ ನ ಕುಖ್ಯಾತ ಸದಸ್ಯ ಇಸಾಕ್‌ ನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ. ಉಡುಪಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಘಟನೆ ನಡೆದಿದೆ.

ನೆಲಮಂಗಲ ಪೊಲೀಸರನ್ನು ಕಂಡು ಕಾರಿನಲ್ಲಿ ಪರಾರಿಯಾಗಲು ಆರೋಪಿ ಯತ್ನಿಸಿದ್ದ. ಬೆಂಬಿಡದೇ ಪೊಲೀಸರು ಚೇಸ್‌ ಮಾಡಿದ್ದಾರೆ. ತಕ್ಷಣ ಮಣಿಪಾಲ ಪೊಲೀಸರಿಗೆ ನೆಲಮಂಗಲ ಪೊಲೀಸರು ಮಾಹಿತಿ ನೀಡಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸ್ ಇನ್‌ ಸ್ಪೆಕ್ಟರ್ ದೇವರಾಜ್, ಮಣಿಪಾಲದ ಮಣ್ಣ ಪಳ್ಳದ ಬಳಿ ಕ್ರಮಿನಲ್‌ ನನ್ನು ಬಂಧಿಸಿದ್ದಾರೆ. ಪೊಲೀಸರು ಬೆನ್ನಟ್ಟುವ ವೇಳೆ ನಾಲ್ಕು ಕಾರು ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಆರೋಪಿ ಯತ್ನಿಸಿದ್ದ. ಅಪಘಾತವಾದ ಕಾರಣ ಮುಂದೆ ಚಲಿಸಲು ಕಷ್ಟವಾಗಿ ಕೊನೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರಿನಲ್ಲಿ ಆರೋಪಿ ಜೊತೆ ಓರ್ವ ಯುವತಿಯೂ ಪತ್ತೆಯಾಗಿದ್ದಾಳೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿಅಕ್ರಮ ಚಿನ್ನ ಸಾಗಾಟ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಕನ್ನಡ ನಟಿಯ ಫ್ಲಾಟ್‌ ಮೇಲೆ ದಾಳಿ..! ಕೋಟಿ ಕೋಟಿ ಮೌಲ್ಯದ ಚಿನ್ನ ವಶಕ್ಕೆ..!

See also  ಸುಳ್ಯ: ಕೆವಿಜಿ ಕಾನೂನು ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ,ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯಮೂರ್ತಿ ಎಂ. ಕರ್ಪಗ ವಿನಯಗಂ ಭಾಗಿ
  Ad Widget   Ad Widget   Ad Widget   Ad Widget   Ad Widget   Ad Widget