ಕರಾವಳಿಕ್ರೈಂ

ಒಂದೇ ಕುಟುಂಬದ ತಾಯಿ ಮಕ್ಕಳ ಭೀಕರ ಹತ್ಯೆ, ಚೂರಿಯಿಂದ ಚುಚ್ಚಿ ಅಪರಿಚಿತ ಪರಾರಿ

ನ್ಯೂಸ್ ನಾಟೌಟ್: ತಾಯಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ನಡೆದಿರುವ ಪ್ರಕರಣ ಉಡುಪಿಯ ಮಲ್ಪೆ ಠಾಣಾ ವ್ಯಾಪ್ತಿಯ ತೃಪ್ತಿನಗರದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಹಸೀನಾ (46 ವರ್ಷ), ಅಫ್ನಾನ್ (23 ವರ್ಷ), ಅಯ್ನಾಝ್ (21 ವರ್ಷ) ಮತ್ತು ಆಸಿಂ (12 ವರ್ಷ) ಸಾವಿಗೀಡಾಗಿದ್ದಾರೆ.

ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಅನ್ನುವುದರ ಕುರಿತು ಇನ್ನಷ್ಟೇ ತನಿಖೆ ನಡೆಯುತ್ತಿದೆ. ಮೇಲ್ನೋಟಕ್ಕೆ ಯಾವುದೇ ಕಳ್ಳತನದಂತಹ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಒಳಗಡೆಯಿಂದ ಜೋರಾಗಿ ಕಿರುಚುವ ಶಬ್ಧವಷ್ಟೇ ಕೇಳಿ ಬಂದಿದೆ. ನೆರೆ ಮನೆಯವರು ಬಂದು ನೋಡಿದಾಗ ನಾಲ್ವರ ಹೆಣ ಬಿದ್ದಿತ್ತು ಎಂದು ಹೇಳಲಾಗುತ್ತಿದೆ.ಸದ್ದು ಕೇಳಿ ಆಟವಾಡುತ್ತಿದ್ದ ಆಸೀಮ್ ಒಳ ಬರುತ್ತಿದ್ದಂತೆ ದುಷ್ಕರ್ಮಿ ಇರಿದು ಕೊಂದಿದ್ದಾನೆ.ಬೊಬ್ಬೆ ಕೇಳಿ ಹೊರಗಡೆ ಬಂದ ಪಕ್ಕದ ಮನೆ ಯುವತಿಯನ್ನೂ ಬೆದರಿಸಿ ಸ್ಥಳದಿಂದ ದುಷ್ಕರ್ಮಿ ಕಾಲ್ಕಿತ್ತಿದ್ದಾನೆ.ಮನೆಯೊಳಗಿದ್ದ ಹಸೀನಾ ಅತ್ತೆಗೂ ಚೂರಿ ಇರಿದಿದ್ದು ತೀವ್ರ ತರದ ಗಾಯಗಲಾಗಿವೆ ಹಾಗೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಹಸೀನಾ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆಂದು ಮಾಹಿತಿ ಲಭ್ಯವಾಗಿದೆ.ಸ್ಥಳಕ್ಕೆ ಎಸ್ ಪಿ ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಕ್ಕಳ ಮೇಲಿನ ದ್ವೇಷದಿಂದ ಕೃತ್ಯ ನಡೆದಿದೆಯೇ ಅಥವಾ ಮಹಿಳೆಯ ಮೇಲೆ ಏನಾದರೂ ದ್ವೇಷವಿತ್ತೇ ಅನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಷ್ಟೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Related posts

ಘಟಾನುಘಟಿ ನಾಯಕರನ್ನು ಮಕಾಡೆ ಮಲಗಿಸಿದ ಮತದಾರ..!

ಚಿಕ್ಕಮಗಳೂರಿನಲ್ಲಿ ಸತತ 2 ಗಂಟೆಯಿಂದ ಮಳೆಯ ಅಬ್ಬರ, ಹೈರಾಣಾದ ಜನ

ಎರಡು ಬೈಕ್‌ಗಳ ನಡುವೆ ಅಪಘಾತ, ಓರ್ವ ಸಾವು, ಮತ್ತೋರ್ವ ಗಂಭೀರ