ಉಡುಪಿಕರಾವಳಿಕ್ರೈಂವೈರಲ್ ನ್ಯೂಸ್

ಉಡುಪಿ: ಕೊಡಪಾನ ತೆಗೆಯಲು ಬಾವಿಗೆ ಇಳಿದ ವ್ಯಕ್ತಿ ಬಿದ್ದು ಸಾವು..! ಹೋಟೆಲ್‌ ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ..!

ನ್ಯೂಸ್ ನಾಟೌಟ್ : ಕೊಡಪಾನ ತೆಗೆಯಲು ಬಾವಿಗೆ ಇಳಿದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಡಿ.23ರಂದು ಉಡುಪಿ ಜಿಲ್ಲೆಯ ಮಣಿಪಾಲದ ಸರಳೆಬೆಟ್ಟುವಿನ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಬಳಿ ನಡೆದಿದೆ.

ಮೃತರನ್ನು ಸರಳಬೆಟ್ಟು ನಿವಾಸಿ ಕೂಲಿ ಕಾರ್ಮಿಕ ಶಿವ ನಾಯ್ಕ್(50) ಎಂದು ಗುರುತಿಸಲಾಗಿದೆ. ಇವರು ನೆರೆಕರೆಯ ಕಲ್ಯಾಣಿ ಎಂಬವರ ಬಾವಿಯಲ್ಲಿ ಬಿದ್ದಿರುವ ಕೊಡಪಾನವನ್ನು ತೆಗೆಯಲು ಬಾವಿಗೆ ಇಳಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದರೆನ್ನಲಾಗಿದೆ.

ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಅಗ್ನಿ ಶಾಮಕ ದಳದವರ ಮೇಲಕ್ಕೇತ್ತಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ದಾರಿ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಮಣಿಪಾಲದ ಹೋಟೆಲ್‌ ನಲ್ಲಿ ಕೆಲಸ ಮಾಡಿ ಕೊಂಡಿದ್ದ ಇವರು, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click

https://newsnotout.com/2024/12/mother-got-currect-shock-and-injured-infront-of-baby-kad/
https://newsnotout.com/2024/12/8-month-ago-shop-opened-by-friends-kannada-news-case/
https://newsnotout.com/2024/12/air-bag-blast-kannada-news-viral-news-d/

Related posts

ಮಂಗಳೂರು:ಹಾಸ್ಟೆಲ್ ಕಟ್ಟಡದಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ,ಡೆತ್ ನೋಟ್ ಪತ್ತೆ

ಪಾಕ್‌ ಸೇನೆಯ ಡ್ರೋನ್ ಪುಡಿಗಟ್ಟಲು ಹದ್ದುಗಳ ಬಳಕೆ, ಭಾರತ ಸೇನೆಯಿಂದ ಮಹತ್ವದ ಪ್ರಯತ್ನ

ಧರ್ಮಸ್ಥಳ ದೇಗುಲಕ್ಕೆ ಉಪ ಮುಖ್ಯಮಂತ್ರಿ ಭೇಟಿ, ಡಾ.ಡಿ ವೀರೇಂದ್ರ ಹೆಗ್ಗಡೆ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದೇನು..?