ಉಡುಪಿಕರಾವಳಿರಾಜ್ಯವೈರಲ್ ನ್ಯೂಸ್ಸಿನಿಮಾ

ಉಡುಪಿ : ಕಂಗುವಾದಿಂದ ಕಂಗಾಲಾದ ನಟ ಸೂರ್ಯನಿಂದ ಕೊಲ್ಲೂರು ಮೂಕಾಂಬಿಕೆಯ ದರ್ಶನ, ಚಂಡಿಕಾಯಾಗದಲ್ಲಿ ಭಾಗಿಯಾದ ಸ್ಟಾರ್ ದಂಪತಿ

233

ನ್ಯೂಸ್ ನಾಟೌಟ್ : ಕಂಗುವಾ ಸಿನಿಮಾದ ಸೋಲಿನ ಬಳಿಕ ತಮಿಳು ಚಿತ್ರರಂಗದ ಖ್ಯಾತ ತಾರಾ ದಂಪತಿ ಸೂರ್ಯ ಹಾಗೂ ಜ್ಯೋತಿಕಾ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆಯ ದೇವಾಲಯಕ್ಕೆ ಭೇಟಿ ನೀಡಿ ಇಂದು(ನ.26) ದೇವರ ದರ್ಶನ ಪಡೆದರು.

ಬಳಿಕ ದೇವಾಲಯದಲ್ಲಿ ನಡೆದ ಚಂಡಿಕಾಯಾಗದಲ್ಲಿ ದಂಪತಿ ಭಾಗಿಯಾದರು. ನಿನ್ನೆ ರಾತ್ರಿ ಕೊಲ್ಲೂರಿಗೆ ಆಗಮಿಸಿದ ಕಾಲಿವುಡ್ ದಂಪತಿ ಇಂದು ಪೂರ್ಣಾಹುತಿಯಲ್ಲಿ ಭಾಗಿಯಾದರು.

ನಟ ಸೂರ್ಯ ಹಾಗೂ ಜ್ಯೋತಿಕಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು . ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದಲ್ಲೂ ಸಹ ಸೂರ್ಯ ಹಾಗೂ ಜ್ಯೋತಿಕಾ ಅವರಿಗೆ ಸಾಕಷ್ಟು ಅಭಿಮಾನಿಗಳಿರೋದು ಗೊತ್ತಿರುವ ವಿಚಾರ.

ಸೌತ್​ ಸೂಪರ್​ ಸ್ಟಾರ್​ ಸೂರ್ಯ ಮುಖ್ಯಭೂಮಿಕೆಯ ಲೇಟೆಸ್ಟ್ ಸಿನಿಮಾ ‘ಕಂಗುವ’ ನಿರೀಕ್ಷೆಯಂತೆ ಕಲೆಕ್ಷನ್ ಮಾಡಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಖ್ಯಾತ ನಿರ್ದೇಶಕ ಶಿವ ಆ್ಯಕ್ಷನ್​ ಕಟ್​ ಹೇಳಿರುವ ನಿರ್ದೇಶನದ ಸಿನಿಮಾ ‘ಕಂಗುವ’ ಬಿಡುಗಡೆಯಾದಾಗಿನಿಂದಲೂ ಬಾಕ್ಸ್ ಆಫೀಸ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಇದ್ದ ಸದ್ದು ಈಗಿಲ್ಲ. ಭವ್ಯ ದೃಶ್ಯಗಳು, ಸ್ಟಾರ್ ಪವರ್‌ ನಿಂದ ಕೂಡಿದ್ದರೂ ಚಿತ್ರದ ಕಲೆಕ್ಷನ್​​ ವೇಗ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನಲಾಗಿದೆ.

Click

https://newsnotout.com/2024/11/andra-cm-chandra-babu-naidu-and-dairector-ram-gopal-warma/
https://newsnotout.com/2024/11/40-crore-budget-business-of-cinema-collects-25-lakh-v/
https://newsnotout.com/2024/11/darshan-kananda-news-bail-viral-news-viral-news-fh/
https://newsnotout.com/2024/11/puri-kannada-news-viral-news-school-jhf/
https://newsnotout.com/2024/11/pan-card-issue-narendra-modi-kananda-news-2-0/
See also  ಉಪಚುನಾವಣೆ ಹೊಸ್ತಿಲಲ್ಲಿ ಮಿಡ್‌ನೈಟ್‌ ಆಪರೇಷನ್‌ ಸಕ್ಸಸ್‌,ಯೋಗೇಶ್ವರ್‌ ಕಾಂಗ್ರೆಸ್‌ ಗೆ ಸೇರ್ಪಡೆ..!ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ರಾಜಕೀಯ ರಣತಂತ್ರ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget