ಉಡುಪಿಕ್ರೈಂವೈರಲ್ ನ್ಯೂಸ್

ಉಡುಪಿ: ತರಕಾರಿ ಗಿಡಗಳ ಮಧ್ಯೆ ಕಳೆ ಕೀಳುವಾಗ ಕಚ್ಚಿದ ಹಾವು..! ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು..!

ನ್ಯೂಸ್ ನಾಟೌಟ್: ವಿಷದ ಹಾವು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಉಡುಪಿ ಬ್ರಹ್ಮಾವರದ ಕೊಕ್ಕರ್ಣೆ ಪಂಚಾಯತ್ ಬಳಿ ನಿನ್ನೆ(ಜ.27) ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ಲಕ್ಕಮ್ಮ ಬಾಯಿ(81) ಎಂದು ಗುರುತಿಸಲಾಗಿದೆ. ಜ.14ರಂದು ಮನೆಯ ಸಮೀಪ ವಿರುವ ಗದ್ದೆಯಲ್ಲಿ ತರಕಾರಿ ಗಿಡಗಳ ಮಧ್ಯೆ ಇರುವ ಕಳೆಯನ್ನು ಕೀಳುತ್ತಿರುವಾಗ ಕಾಲಿನ ಪಾದದ ಬಳಿ ನಾಗರಹಾವು ಕಚ್ಚಿದೆ ಎನ್ನಲಾಗಿದೆ.

ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ.27ರಂದು ನಸುಕಿನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click

https://newsnotout.com/2025/01/key-pad-mobile-phone-issue-hospital-hjd/
https://newsnotout.com/2025/01/tiger-issue-viral-news-kerala-viral-news-df/

Related posts

ಸೌಜನ್ಯ ಸಾವಿನ ನ್ಯಾಯಕ್ಕಾಗಿ ಸುಳ್ಯದಲ್ಲೂ ತಲೆಯೆತ್ತಿದ ಬ್ಯಾನರ್ , ತೆರೆಮರೆಯಲ್ಲಿ ನಡೆಯುತ್ತಿದೆಯಾ ಹೋರಾಟದ ತಯಾರಿ?

ಯಡಕುಮಾರಿ ಬಳಿ ಗುಡ್ಡ ಕುಸಿತ, ಬೆಂಗಳೂರು -ಮಂಗಳೂರು ರೈಲ್ವೆ ಸಂಚಾರ ಅಸ್ತವ್ಯಸ್ತ

ಮಹಿಳೆಯನ್ನು ಮತಾಂತರಕ್ಕೆ ಯತ್ನಿಸಿದ ಮುಸ್ಲಿಂ ದಂಪತಿ..! ನೇಹಾ ಪ್ರಕರಣದ ಸವದತ್ತಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ