Latestಉಡುಪಿಕರಾವಳಿ

ಉಡುಪಿ: ಕುಂದಾಪುರದ ಉಪನ್ಯಾಸ ಕಾರ್ಯಕ್ರಮದ ಬಗ್ಗೆ ಚಕ್ರವರ್ತಿ ಸೂಲಿಬೆಲೆಗೆ ನೋಟಿಸ್ ಜಾರಿ..! ಪತ್ರದಲ್ಲೇನಿದೆ..?

340

ನ್ಯೂಸ್ ನಾಟೌಟ್: ಕುಂದಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆಯವರಿಂದ `ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ವಿಚಾರವಾಗಿ ಜೂ.20, 21 ಮತ್ತು 22 ರಂದು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಪೊಲೀಸರು, ರಾಜಕೀಯ ಮಾತನಾಡಬಾರದು ಹಾಗೂ ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದು ಆಯೋಜಕರಿಗೆ ಹಾಗೂ ಸುಲಿಬೆಲೆಯವರಿಗೆ ನೋಟಿಸ್ ನೀಡಿದ್ದಾರೆ.

ಇದೀಗ ನೋಟಿಸ್ ವಿಚಾರಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಕರ್ನಾಟಕದಲ್ಲಿ ರಾಜಕೀಯ ಮಾತಾಡಬಾರದು ಎಂಬುದು ಯಾವಾಗಿನಿಂದ ಜಾರಿಯಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಕುಂದಾಪುರ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.

ಇದು ನನ್ನನ್ನು ಅಘೋಷಿತ ಗಡಿಪಾರು ಮಾಡಿಸುವ ಪ್ರಯತ್ನವಾಗಿದೆ. ನನಗೆ ನೋಟಿಸ್ ಹೊಸತಲ್ಲ, ಬಹಳ ಕಡೆಗಳಲ್ಲಿ ನೋಟಿಸ್ ಕೊಟ್ಟಿದ್ದಾರೆ. ಈ ಬಾರಿ ರಾಜಕೀಯ ಮಾತನಾಡಬಾರದು, ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದಿದ್ದಾರೆ. ನೆಹರು, ಇಂದಿರಾ, ರಾಜೀವ್ ಕುರಿತಂತೆ ಮಾತನಾಡಬಾರದು ಎಂದು ಅರ್ಥವೇ? ಘಜ್ನಿ, ಘೋರಿ, ಔರಂಗಜೇಬ್ ಮುಂತಾದ ಕ್ರೂರಿಗಳ ತೇಜೋವಧೆ ಮಾಡಬಾರದೆಂದು ಅರ್ಥವೇ? ಕರ್ನಾಟಕದಲ್ಲಿ ರಾಜಕೀಯ ಮಾತನಾಡಬಾರದು ಎನ್ನುವುದು ಎಂದಿನಿಂದ ಜಾರಿಯಾಯಿತು? ಕುಂದಾಪುರ ಪೊಲೀಸರೇ ಮಾಹಿತಿ ಕೊಟ್ಟರೆ ಉತ್ತಮ. ನಾನು ಕುಂದಾಪುರಕ್ಕೆ ಬರಬಾರದೆಂದು ಹೇಳುವವರು ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ ಎಂದಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕ್ರಮದ ಆಯೋಜಕ ನಿರಂಜನ್ ಶೆಟ್ಟಿ ಮಾತನಾಡಿ, ಎನ್‍ ಎಸ್‍ ಯುಐನವರು ಚಕ್ರವರ್ತಿ ಸೂಲಿಬೆಲೆಯವರು ಕುಂದಾಪುರಕ್ಕೆ ಬರಬಾರದು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ತಡೆಯಲು ಎಷ್ಟೇ ಪ್ರಯತ್ನಪಟ್ಟರು ಕಾರ್ಯಕ್ರಮ ಮಾಡಿಯೇ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ..! ಕೋರ್ಟ್ ಗೆ ರಹಸ್ಯ ಮಾಹಿತಿ ಹಂಚಿಕೊಂಡ ಸ್ವಯಂ ಘೋಷಿತ ದೇವಮಾನವನ ಶಿಷ್ಯರು..!

ಏರ್ ಇಂಡಿಯಾ ವಿಮಾನ ದುರಂತದ 215 ಮಂದಿಯ ಡಿಎನ್‌ ಎ ಮ್ಯಾಚ್‌, 198 ಮೃತದೇಹ ಹಸ್ತಾಂತರ

See also  ಶೋಗೆ 3 ಗಂಟೆ ತಡವಾಗಿ ಬಂದ ಬಾಲಿವುಡ್‌ ನ ಜನಪ್ರಿಯ ಗಾಯಕಿ..! ಪ್ರೇಕ್ಷಕರ ಆಕ್ರೋಶಕ್ಕೆ ವೇದಿಕೆಯಲ್ಲಿ ಗಳಗಳನೆ ಅತ್ತ ನೇಹಾ ಕಕ್ಕರ್.! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget