ಕರಾವಳಿಕ್ರೈಂರಾಜಕೀಯ

‘ಹುಡುಗಿಯರ ಟಾಯ್ಲೆಟ್‌ನಲ್ಲಿ ವಿಡಿಯೋ ಪ್ರಕರಣ, ತನಿಖೆ ಸಾಗುತ್ತಿರುವ ರೀತಿ ನೋಡಿದ್ರೆ ಸಂಶಯ ಬರುತ್ತೆ’ ಮಂಗಳೂರಿನಲ್ಲಿ ಶಾಸಕ ಭರತ್ ಶೆಟ್ಟಿ ಹೇಳಿಕೆ

185

ನ್ಯೂಸ್ ನಾಟೌಟ್: ಪ್ಯಾರಾ ಮೆಡಿಕಲ್ ಕಾಲೇಜು ಹುಡುಗಿಯರ ಟಾಯ್ಲೆಟ್‌ನಲ್ಲಿ ಮೊಬೈಲ್ ವಿಡಿಯೋ ಪ್ರಕರಣದ ತನಿಖೆ ಅನುಮಾನ ಹುಟ್ಟಿಸುವಂತಿದೆ ಎಂದು ಮಂಗಳೂರಿನಲ್ಲಿ ಶಾಸಕ ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಶೂಟ್ ಮಾಡಿದ ಮೊಬೈಲ್ ನಲ್ಲಿ ವಿಡಿಯೋ ಸಿಗದ ಹಿನ್ನಲೆ ಮಂಗಳೂರಿನಲ್ಲಿ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ನಮಗೆ ತನಿಖೆ ಸಾಗುತ್ತಿರುವ ರೀತಿ ನೋಡಿದ್ರೆ ಸಂಶಯ ಕಾಡುತ್ತೆ
ಘಟನೆಗೆ ಬಳಕೆಯಾಗಿರುವ ಮೊಬೈಲ್ ಚೇಂಜ್ ಆಗಿರಬಹುದು, ನಮಗೆ ಮೊಬೈಲ್ ಚೇಂಜ್ ಆಗಿರುವ ಬಗ್ಗೆ ಸಂಶಯ ಇದೆ. ಈ ಪ್ರಕರಣವನ್ನ ಎಸ್ ಐ ಟಿ ಯವರು ತನಿಖೆ ಮಾಡಬೇಕು,
ಕಾಂಗ್ರೆಸ್ ನವರು ಈ ಪ್ರಕರಣವನ್ನ ಮಕ್ಕಳಾಟಿಕೆ ಎನ್ನುತ್ತಾರೆ, ಇದೆ ಪ್ರಕರಣದ ಆರೋಪಿಗಳಾಗಿ ಹಿಂದೂ ಹುಡುಗಿಯರಿದ್ದು. ಸಂತ್ರಸ್ತೆ ಮುಸ್ಲಿಂ ಆಗಿದ್ರೆ ಕಾಂಗ್ರೆಸ್ ನವರು ಕ್ಯೂ ನಲ್ಲಿ ನಿಂತು ಪ್ರತಿಭಟನೆ ಮಾಡ್ತಾಯಿದ್ರು ಎಂದು ಕುಟುಕಿದ್ದಾರೆ.

ಈ ವಿಚಾರದ ತನಿಖೆಯನ್ನು ಆದಷ್ಟು ಬೇಗ ಎಸ್‌ಐಟಿಗೆ ನೀಡಬೇಕು. ಇದು ಮಕ್ಕಳಾಟಿಕೆಯ ವಿಚಾರವಲ್ಲ. ಯಾವುದೇ ಪಕ್ಷಪಾತವಿಲ್ಲದೆ ತನಿಖೆ ನಡೆಸಬೇಕು ಎಂದು ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.

See also  ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಅಗ್ನಿ ಅವಘಡ: 8 ಸಾವು
  Ad Widget   Ad Widget   Ad Widget   Ad Widget   Ad Widget   Ad Widget   Ad Widget