ಉಡುಪಿಕರಾವಳಿಕ್ರೈಂ

ಉಡುಪಿ: ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಸಾವನ್ನಪ್ಪುತ್ತಿದ್ದಂತೆ, ಹಾಸ್ಪಿಟಲ್ ಹೊರಗಿದ್ದ ಮಗನೂ ಸಾವು..! ಮಗನ ಸಾವಿನ ಹಿಂದಿದೆ ಹಲವು ಅನುಮಾನ..!

ನ್ಯೂಸ್‌ ನಾಟೌಟ್‌: ತಂದೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಮಗ ಆಸ್ಪತ್ರೆ ಹೊರಗೆ ಪ್ರಾಣಬಿಟ್ಟಿದ್ದಾನೆ. ನಿನ್ನೆ ಸಂಜೆ ಅಣ್ಣನ ಸ್ನೇಹಿತನೊಂದಿಗೆ ತನ್ನ ತಂದೆಯನ್ನ ಮಣಿಪಾಲ ಆಸ್ಪತ್ರೆಗೆ (Manipal Hospital) ದಾಖಲಿಸಿ ರಾತ್ರಿ ಕಾರಿನಲ್ಲಿ ಮಲಗಿ ಬೆಳಗಾಗುವಷ್ಟರಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು (Chikkamgaluru) ಜಿಲ್ಲೆಯ ಕಡೂರಿನ ನಿವಾಸಿ 32 ವರ್ಷದ ಗುರುರಾಜ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಈತ ತಂದೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲದ ಹಿನ್ನಲೆ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ತನ್ನದೇ ಕಾರಿನಲ್ಲಿ ಗ್ಲಾಸ್ ಮುಚ್ಚಿ ಎಸಿ ಹಾಕಿ ಮಲಗಿದ್ದ ಎನ್ನಲಾಗಿದೆ. ಈ ಹಿನ್ನಲೆ ಬೆಳಗಾಗುವಷ್ಟರಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಉಸಿರುಗಟ್ಟಿ ಸಾವನ್ನಪ್ಪಲು ನಿಖರ ಕಾರಣ ಮರಣೋತ್ತರ ವರದಿ ಬಳಿಕವಷ್ಟೇ ತಿಳಿಯಲಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/drunk-bengaluru-auto-rikshaw-kannada-news-viral-protest/
https://newsnotout.com/2024/08/govt-bus-and-car-collision-kannada-news-gadaga-viral-news/

Related posts

ಯುವತಿಯೊಂದಿಗೆ ಸುತ್ತಾಡುತ್ತಿದ್ದಾತನಿಗೆ ಹಲ್ಲೆ ನಡೆಸಿದ ನಾಲ್ವರ ಸೆರೆ

ಸುಳ್ಯ: ಅಕ್ರಮ ಗೋ ಸಾಗಾಟದ ಶಂಕೆ, ವಾಹನವನ್ನು ತಡೆದು ನಿಲ್ಲಿಸಿದ ಬಜರಂಗ ದಳ ಕಾರ್ಯಕರ್ತರು

ಪಿಯುಸಿ ಫಲಿತಾಂಶ : ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ, ಇಲ್ಲಿದೆ ಸಂಪೂರ್ಣ ವಿವರ