ಕರಾವಳಿ

ಉಡುಪಿ: ಹಿಂಜಾವೇ ರಾಜ್ಯ ಖಾತೆ, 20ಕ್ಕೂ ಹೆಚ್ಚು ಮುಖಂಡರ ಫೇಸ್ಬುಕ್ ಅಕೌಂಟ್ ಏಕಾಏಕಿ ಡಿಲೀಟ್ ಆಗಿದ್ಯಾಕೆ?ಹಿಂಜಾವೇ ಮುಖಂಡ ಈ ಬಗ್ಗೆ ಹೇಳಿದ್ದೇನು?

194

ನ್ಯೂಸ್ ನಾಟೌಟ್ : ಹಿಂದೂ ಜಾಗರಣ ವೇದಿಕೆಯ ರಾಜ್ಯದ 20ಕ್ಕೂ ಅಧಿಕ ಪ್ರಮುಖರ ಫೇಸ್ ಬುಕ್ ಪ್ರೊಫೈಲ್ ಗಳನ್ನು ಏಕಕಾಲದಲ್ಲಿ ತೆಗೆದು ಹಾಕಲಾಗಿದೆ ಎನ್ನುವ ಸುದ್ದಿಯೊಂದು ಭಾರಿ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಒಂದು ಘಟನೆ ಹಿಂದೂ ಜಾಗರಣ ವೇದಿಕೆಯ ನಾಯಕರಲ್ಲಿ ಹಲವು ಅನುಮಾನಗಳನ್ನು ಉಂಟು ಮಾಡಿದೆ.

ಹಿಂದೂ ಜಾಗರಣ ವೇದಿಕೆಯ ರಾಜ್ಯ ಫೇಸ್ಬುಕ್ ಪೇಜ್ ನಲ್ಲಿ ಸಂಘಟನೆ ವಿಚಾರವಾಗಿ ಹಲವು ಪೋಸ್ಟ್ ಗಳನ್ನು ಅಪ್ ಡೇಟ್ ಮಾಡಲಾಗುತ್ತಿತ್ತು.ಕಾರ್ಯಕ್ರಮಗಳ ವಿವರಗಳು ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ಅಲ್ಲಿ ಶೇರ್ ಮಾಡಲಾಗುತ್ತಿತ್ತು.ಇದೊಂದು ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಯಾಗಿದ್ದರೂ,ಹಿಂದೂ ಜಾಗರಣ ವೇದಿಕೆಯ ರಾಜ್ಯ ಫೇಸ್ಬುಕ್ ಪೇಜ್ ಸೇರಿದಂತೆ ಎಲ್ಲಾ ಹಿಂಜಾವೇ ಜಿಲ್ಲಾ ನಾಯಕರ fb ಅಕೌಂಟ್ ಹಾಗೂ ಜಾಗರಣಾ ವೇದಿಕೆ ಮುಖಂಡರ ವೆಬ್ ಪೇಜ್, ಡಿಜಿಟಲ್ ಚಾನೆಲ್ ಇದ್ದಕ್ಕಿದ್ದ ಹಾಗೆ ಹ್ಯಾಕ್ ಮಾಡಲಾಗಿದೆ. ಹಲವು ಮುಖಂಡರ ಪ್ರೊಫೈಲ್‌ಗಳು ಏಕಾಏಕಿ ಮಾಯವಾಗಿದೆ..!

ಈ ಬಗ್ಗೆ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡುತ್ತಾ “ಸರ್ಕಾರದ ಸೂಚನೆ ಮೇರೆಗೆ ಈ ಕೆಲಸ ಮಾಡಿದ್ದಾರೋ? ಅಥವಾ ಹ್ಯಾಕರ್ಸ್ ಗಳನ್ನು ಬಳಸಿ ಮಾಡಿದ್ದಾರೋ ಎಂಬುವುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಹಿಂದೂ ವಿಚಾರಗಳನ್ನು, ಹೋರಾಟ ಮಾಡುತ್ತಿದ್ದವರನ್ನು ಹತ್ತಿಕ್ಕುವ ಕೆಲಸವಾಗಿದೆ ಎಂದು ತಿಳಿದು ಬರುತ್ತಿದೆ ಎಂದರು.

ಮುಂದುವರಿದು ಮಾತನಾಡಿದ ಅವರು “ಈ ರೀತಿಯ ಸೈಬರ್ ದಾಳಿಯನ್ನು ಗಮನಿಸಿದಾಗ ಇದೊಂದು ಟಾರ್ಗೆಟ್ ಎಂದು ಅನಿಸುತ್ತದೆ. ಅಂದ್ರೆ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಮಾಡಿರುವ ಕುತಂತ್ರವೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ.ಅಂದು 2014 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪರ ಭಾರಿ ಮಟ್ಟದ ಅಭಿಯಾನವೇ ನಡೆದಿತ್ತು.ಇದರಿಂದ ಸಾಕಷ್ಟು ಸಕರಾತ್ಮಕ ಬೆಳವಣಿಗೆಗಳಾಗಿದ್ದವು.ಹೀಗಾಗಿ ಆ ರೀತಿಯ ಅಭಿಯಾನ ಈ ಬಾರಿ ಮರುಕಳಿಸಬಾರದು ಎಂದೇ ಹಿಂದೂ ಮುಖಂಡರ ಪೇಜ್ ಗಳನ್ನು ಡಿಲೀಟ್ ಮಾಡಲಾಗಿದೆ” ಎಂದರು.

ಇದಕ್ಕೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ಕೇವಲ ಸಾಮಾಜಿಕ ಜಾಲತಾಣವನ್ನು ನಂಬಿಕೊಂಡಿರುವ ಫೇಸ್ ಬುಕ್ ಹುಲಿಗಳಲ್ಲ. ಹಿಂಜಾವೇ ಜನರ ಮಧ್ಯೆ ಹೋಗಿ ಕೆಲಸ ಮಾಡಿದೆ, ಅವರ ವಿಶ್ವಾಸವನ್ನು ಗಳಿಸಿದೆ.ಅನೇಕರಿಗೆ ಸ್ಪಂದಿಸಿದೆ. ಮುಂದೆಯೂ ಈ ಕೆಲಸ ಮಾಡಲು ಸಂಘಟನೆ ಸಿದ್ಧವಾಗಿದೆ “ಎಂದು ಹೇಳಿದರು.

https://www.youtube.com/watch?v=pw95EAmlpP8
See also  ನಟಿ ರಶ್ಮಿಕಾ ಮಂದಣ್ಣ ತಲೆ ಬೋಳಿಸಿದ ಕುದ್ರೋಳಿ ಗಣೇಶ್‌..! ವಿಡಿಯೋ ವೈರಲ್‌
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget