ಕರಾವಳಿಕ್ರೈಂವೈರಲ್ ನ್ಯೂಸ್

ಉಡುಪಿ: ನಮಾಜ್ ಮಾಡುತ್ತಿರುವಾಗಲೇ ಹೃದಯಾಘಾತ..! ಇಲ್ಲಿದೆ ಮನಕಲಕೋ ಘಟನೆ

264

ನ್ಯೂಸ್ ನಾಟೌಟ್ : ನಮಾಜ್ ಮಾಡುವಾಗಲೇ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿ ನಗರದ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ ನಡೆದಿದೆ.

ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ ಮುಸ್ತಾಕ್ (55) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ ಎಂದು ವರದಿ ತಿಳಿಸಿದೆ. ಮುಸ್ತಾಕ್ ಎಂದಿನಂತೆ ನಿನ್ನೆ (ಫೆಬ್ರವರಿ 09) ಮಸೀದಿಗೆ ತೆರಳಿದ್ದಾರೆ.

ಬೆಳಗ್ಗೆ ಎಲ್ಲರೊಂದಿಗೆ ಸಾಲಿನಲ್ಲಿ ಕುಳಿತುಕೊಂಡು ಮೊದಲು ನಮಾಜ್ ಮಾಡಿದ್ದಾರೆ. ಹೃದಯಾಘಾತವಾಗುವಾಗ ಮೊದಲು ನಿಧಾನಕ್ಕೆ ನೆಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಜೊತೆಯಲ್ಲಿದ್ದವರು ದೇವರಿಗೆ ನಮಸ್ಕಾರ ಮಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದು, ಮುಸ್ತಾಕ್ ವರ್ತನೆ ಕಂಡು ಜೊತೆಯಲ್ಲಿ ಪಕ್ಕದಲ್ಲಿದ್ದ ವ್ಯಕ್ತಿ ಕೈ ಹಿಡಿದು ಎತ್ತಿದ್ದಾರೆ.

ಆದರೆ ದುರಾದೃಷ್ಟವಶಾತ್ ಮುಸ್ತಾಕ್ ಸಂಪೂರ್ಣವಾಗಿ ನೆಲಕ್ಕೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ನಮಾಜ್ ವೇಳೆ ವ್ಯಕ್ತಿ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

See also  ಆ ಒಂದು ಕಾರಣಕ್ಕೆ ಕರಡಿ ವೇಷ ಧರಿಸಿ ಹೊಲದಲ್ಲೆಲ್ಲ ಓಡಾಡಿದ ಯುವಕ..! ಏನಿದು ವಿಚಿತ್ರ ಘಟನೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget