ಕರಾವಳಿವೈರಲ್ ನ್ಯೂಸ್

ಸ್ವಚ್ಛ ಭಾರತದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರಪತಿಗಳ ಮುಂದೆ ಭಾಷಣ ,ಪ್ರಥಮ ಸ್ಥಾನ ಪಡೆದು ವೈರಲ್ ಆದ ಉಡುಪಿಯ ಬಾಲಕಿ!

318

ನ್ಯೂಸ್ ನಾಟೌಟ್ :ಉಡುಪಿಯ ಬಾಲಕಿಯೊಬ್ಬಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಸ್ವಚ್ಛ ಭಾರತದ ಭಾಷಣ ಮಾಡಿ ಬಾರಿ ವೃರಲ್ ಆಗಿದ್ದಾಳೆ. ಹೌದು, ಬಂದಿರುವ ಸಣ್ಣ ಅವಕಾಶದಲ್ಲಿ, ಉಡುಪಿಯ ಪಾಜಕದ ಆನಂದತೀರ್ಥ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿನಿ ಅವಂತಿಕಾ ವಿ ರಾವ್ ಈ ವಾರದ ಆರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಭಾಷಣ ಮಾಡಿದ್ದಾಳೆ.

ಟಾಟಾ ಬಿಲ್ಡಿಂಗ್ ಇಂಡಿಯಾ ಸ್ಕೂಲ್ ಪ್ರಬಂಧ ಸ್ಪರ್ಧೆಯಲ್ಲಿ ಈ ಬಾಲಕಿ ಪ್ರಥಮ ಬಹುಮಾನ ಪಡೆದಿದ್ದು,ಈಕೆ ಹೆಸರು ಅವಂತಿಕಾ. ಸ್ಪರ್ಧೆಯಲ್ಲಿ 30 ಮಿಲಿಯನ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದರಲ್ಲಿ 29 ವಿದ್ಯಾರ್ಥಿಗಳು ವಿಜೇತರಾಗಿದ್ದರು.ಆವಂತಿಕಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 28 ವಿದ್ಯಾರ್ಥಿಗಳು ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದರು. ಅವರಲ್ಲಿ, ಆವಂತಿಕಾ ಮತ್ತು ಇನ್ನೊಬ್ಬ ವಿದ್ಯಾರ್ಥಿ ರಾಜಸ್ಥಾನದ ನಾಗೌರ್‌ನ ಕುಶಿ ಪ್ರಜಾಪತಿ ಅವರು ರಾಷ್ಟ್ರಪತಿಗಳ ಮುಂದೆ ಮಾತನಾಡುವ ಅವಕಾಶವನ್ನು ಪಡೆದ ಭಾಗ್ಯಶಾಲಿಗಳು.

ಅವಂತಿಕಾ ಭಾರತದ ರಾಷ್ಟ್ರಪತಿಗಳ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಕಾಣಿಸಿಕೊಂಡು ಇದೀಗ ವೈರಲ್ ಸ್ಟಾರ್ ಆಗಿದ್ದಾಳೆ. ತಮ್ಮ ಮೂರು ನಿಮಿಷಗಳ ಭಾಷಣದಲ್ಲಿ ಆಕೆ ಸ್ವಚ್ಛ ಭಾರತ ಮತ್ತು ಅದನ್ನು ಸಾಧಿಸಲು ಪ್ರತಿಯೊಬ್ಬರೂ ಹೇಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬ ಭಾಷಣ ಮಾಡಿದ್ದಾಳೆ. ನಮ್ಮ ಸ್ವಚ್ಛತೆಯ ಪ್ರಜ್ಞೆಯನ್ನು ಇತರರಿಗೆ ಸ್ಫೂರ್ತಿ ನೀಡಬೇಕು ಎಂದಿದ್ದಾಳೆ.

See also  ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget