ಕರಾವಳಿಕ್ರೈಂವೈರಲ್ ನ್ಯೂಸ್

ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದ ಯುವಕನ ಶವ ಪತ್ತೆಗೆ ಮುಂದಾದ ಉಡುಪಿಯ ಸಾಹಸಿ..! ಆಪತ್ಬಾಂಧವನಿಗೂ ಎದುರಾಯ್ತಾ ಅಪಾಯ? ಅಷ್ಟಕ್ಕೂ ಅಲ್ಲಿ ನಡೆದದ್ದೇನು?

ನ್ಯೂಸ್ ನಾಟೌಟ್: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತ ನೋಡಲು ಹೋಗಿ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿ ಮೂಲದ ಶರತ್ ಕುಮಾರ್ (23) ಎಂಬ ಯುವಕನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಈ ನಡುವೆ, ಮಳೆಯ ಅಬ್ಬರದ ಮಧ್ಯೆಯೂ ಯುವಕನ ಮೃತದೇಹ ಪತ್ತೆ ಮಾಡಲು ಹೋದ ಸಾಮಾಜಿಕ ಕಾರ್ಯಕರ್ತರೊಬ್ಬರು ತಾವೇ ಅಪಾಯಕ್ಕೆ ಸಿಲುಕಿ, ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ.

ಭದ್ರಾವತಿ ಮೂಲದ ಶರತ್ ಕುಮಾರ್ (23) ಸ್ನೇಹಿತರ ಜತೆ ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದರು. ಇಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ಆತ ಭೋರ್ಗರೆಯುತ್ತಿದ್ದ ಜಲಪಾತದ ಎದುರು ಕಲ್ಲಿನ ಅಂಚಿನಲ್ಲಿ ನಿಂತಿದ್ದ. ಈ ವೇಳೆ ಸಣ್ಣಗೆ ಕಾಲು ಜಾರಿದ್ದು ಯುವಕ ಅಲ್ಲಿಂದಲೇ ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದಾನೆ. ಯುವಕನ ಮೃತದೇಹದ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಪಿಎಸ್ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಕೂಡಾ ಸಹಕಾರ ನೀಡುತ್ತಿದ್ದಾರೆ.

ಇದೊಂದು ಅತ್ಯಂತ ದುರ್ಗಮ ಜಲಪಾತವಾಗಿದ್ದು, ಮಳೆಯಿಂದಾಗಿ ಧುಮ್ಮಿಕ್ಕಿ ಹರಿಯುತ್ತಿದೆ. ಮೇಲಿನಿಂದ ಬೀಳುವ ನೀರು ಅತ್ಯಂತ ಕಿರಿದಾದ ಕಲ್ಲುಗಳ ಬಂಡೆಗಳ ನಡುವೆ ದುರ್ಗಮ ಹಾದಿಯಲ್ಲಿ ಇಳಿದುಹೋಗುತ್ತಿದೆ. ಇದರಿಂದಾಗಿ ಶರತ್‌ ಕುಮಾರ್‌ ಅವರ ಶವವನ್ನು ಎಲ್ಲಿ ಹುಡುಕುವುದು ಎಂದು ತಿಳಿಯದೆ ಅಗ್ನಿ ಶಾಮಕ ದಳ ಕೂಡಾ ಕೈಚೆಲ್ಲುವ ಹಂತಕ್ಕೆ ಬಂದಿದೆ.
ಜಲಪಾತದಲ್ಲಿ ಕೊಚ್ಚಿಹೋದ ಯುವಕನನ್ನು ಪತ್ತೆ ಹಚ್ಚುವುದು ಹೇಗೆ ಎಂದು ತಿಳಿಯದೆ ಅಗ್ನಿಶಾಮಕ ದಳ ಕಂಗಾಲಾಗಿದ್ದ ಹೊತ್ತಿನಲ್ಲಿ ಉಡುಪಿಯ ಸಾಹಸಿಯೊಬ್ಬರು ಆಪತ್ಬಾಂಧವ ಎಂದೇ ಹೆಸರಾದ ಈಶ್ವರ ಮಲ್ಪೆ ಹುಡುಕುವ ಸಾಹಸಕ್ಕೆ ಹೊರಟಿದ್ದರು.

ಶವ ಎಲ್ಲಿ ಸಿಕ್ಕಿ ಹಾಕಿಕೊಂಡಿರಬಹುದು ಎಂದು ಯೋಚಿಸಿ ಒಂದು ಕಡೆ ಕಡಿದಾದ ಜಾಗದಲ್ಲಿ ಇಳಿದು ಹುಡುಕಾಟಕ್ಕೆ ಇಳಿದರು. ಅಲ್ಲಿ ಅವರು ಒಂದು ಕಡೆ ನೀರ ನಡುವಿನಿಂದ ಕೆಳಗಿನಿಂದ ಮೇಲೆ ಕಲ್ಲಿಗೆ ಕೈ ಇಟ್ಟು ಜಿಗಿದು ಹತ್ತಲು ಮುಂದಾದರು.
ಈ ವೇಳೆ ಅವರು ಕೈ ಜಾರಿ ಕಾಲೂ ಜಾರಿ ಕೆಳಗೆ ನೀರಿಗೆ ಬಿದ್ದಿದ್ದಾರೆ. ಆಗ ಅವರ ಗೆಳೆಯರು ಯಾವ ಕಾರಣಕ್ಕೂ ಈ ಸಾಹಸ ಬೇಡ ಮರಳಿ ಬನ್ನಿ ಎಂದು ಒತ್ತಡ ಹೇರಿ ಮೇಲೆ ಕರೆದುಕೊಂಡುಬಂದಿದ್ದಾರೆ. ಹೀಗಾಗಿ ಅವರು ಕೂಡಾ ಶರತ್‌ ಕುಮಾರ್‌ ಸುಳಿವು ಸಿಕ್ಕದೆ ಮರಳಿಬಂದಿದ್ದಾರೆ ಎಮದು ವರದಿ ತಿಳಿಸಿದೆ.

Related posts

ಕನ್ನಡ ಶಾಲೆಗಳ ಬೆಳವಣಿಗೆಯಿಂದ ಸಾಹಿತ್ಯ ಅಭಿವೃದ್ಧಿ ಸಾಧ್ಯ: ಡಾ ಕೆ.ವಿ.ಚಿದಾನಂದ

ಮಾಧ್ಯಮಗಳ ಮೇಲೆ ಪೊಲೀಸರು ಹಾಕಿದ್ದ FIRಗೆ ಹೈಕೋರ್ಟ್ ತಡೆ, ಸುಳ್ಯ ಪೊಲೀಸರು ಹಾಕಿದ್ದ ಆ ಕೇಸ್ ಯಾವುದು..?

ಬಿಜೆಪಿ ಗೆಲುವಿಗೆ ತನ್ನ ಬೆರಳನ್ನೇ ಕತ್ತರಿಸಿಕೊಂಡ ಅಭಿಮಾನಿ ..!, ಯುವಕ ಈ ವಿಚಿತ್ರ ನಿರ್ಧಾರ ಕೈಗೊಂಡಿದ್ದೇಕೆ..?