ಕರಾವಳಿ

ಉಡುಪಿ: ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿದ್ಯಾ ಕುಮಾರಿ ಅಧಿಕಾರ ಸ್ವೀಕಾರ

ನ್ಯೂಸ್‌ ನಾಟೌಟ್‌: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿದ್ಯಾ ಕುಮಾರಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಅಧಿಕಾರ ಹಸ್ತಾಂತರ ಮಾಡಿದರು.

ಡಾ. ವಿದ್ಯಾಕುಮಾರಿ ಅವರು ಪ್ರಸ್ತುತ ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಅವರು ಉಡುಪಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ವಿದ್ಯಾಕುಮಾರಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರು. 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಆಗಿದ್ದಾರೆ.

Related posts

ಸುಳ್ಯ:ಖಾಲಿ ಸಿಲಿಂಡರ್‌ ಇರಿಸಿ ಗ್ಯಾಸ್‌ ತುಂಬಿದ್ದ ಸಿಲಿಂಡರ್‌ ಹೊತ್ತೊಯ್ದ ಕಳ್ಳ..!ಮನೆ ಮಂದಿ ಇರುವಾಗಲೇ ಕಳ್ಳತನ ಮಾಡಿದ ಆ ವ್ಯಕ್ತಿ ಯಾರು?ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ಅಪರೂಪದ ಸುಳಿಗಾಳಿ: ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಮೂಡುಬೈಲಿನಲ್ಲಿ ಅಪಾರ ಹಾನಿ

ನೀರಿಗೆ ಬಿದ್ದ ಕಾರು, ಕ್ಷಣಕ್ಕೊಂದು ತಿರುವು