Latestಉಡುಪಿಕರಾವಳಿ

ಉಡುಪಿ: ಕಾಪು ಮಾರಿಗುಡಿ ದೇಗುಲಕ್ಕೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್, ರಾಜಕೀಯ ನಾಯಕರಲ್ಲಿ ಕುತೂಹಲ ಮೂಡಿಸಿದ ಡಿಕೆಶಿಯ ಹಿಂದುತ್ವದ ಜಪ..!

740

ನ್ಯೂಸ್‌ ನಾಟೌಟ್ : ಸಾಫ್ಟ್ ಹಿಂದುತ್ವದ ಜಪದ ಬೆನ್ನಲ್ಲೆ ಈಗ ಮತ್ತೊಮ್ಮೆ ತಮ್ಮ ದೇಗುಲ ಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ. ‘ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ’ ಎಂದು ಹೇಳಿದ ಡಿಸಿಎಂ ಡಿಕೆ ಶಿವಕುಮಾರ್ ಇಂದು(ಮಾ.2) ಉಡುಪಿ ಕಾಪು ಮಾರಿಗುಡಿ ದೇಗುಲಕ್ಕೆ ಗದ್ದುಗೆ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ.

ಬೆಳಗ್ಗೆ 11:30ಕ್ಕೆ ಮಾರಿಗುಡಿ ಕಾರ್ಯಕ್ರಮ ನಡೆದಿದೆ. ಮಹಾಕುಂಭ ಮೇಳ, ಟಿ ನರಸೀಪುರ ಕುಂಭಮೇಳ, ಈಶಾ ಶಿವರಾತ್ರಿ ಬಳಿಕ ಮಾರಿಗುಡಿಗೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಡಿಕೆ ಶಿವಕುಮಾರ್ ಹಿಂದುತ್ವದ ಚರ್ಚೆ ನಡುವೆಯೇ ಟೆಂಪಲ್ ರನ್ ಶುರು ಮಾಡಿರುವುದು ಸಹಜವಾಗಿ ಕುತೂಹಲ ಮೂಡಿಸಿದೆ. ಡಿಕೆ ಶಿವಕುಮಾರ್ ನಡೆ ಸ್ವಪಕ್ಷ, ವಿಪಕ್ಷದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ ಮಾಜಿ ಸಚಿವ ಸುನೀಲ್ ಕುಮಾರ್, ಗಂಡು ಮೆಟ್ಟಿದ ನಾಡು ಹಿಂದುತ್ವದ ಜಿಲ್ಲೆಗೆ ನೀವು ಬರುತ್ತೀದ್ದೀರಾ ಹಾಗಾಗಿ ಅಭಿವೃದ್ಧಿಯನ್ನೂ ಹೊತ್ತು ತನ್ನಿ ಎಂದು ಡಿಸಿಎಂ ಅನ್ನು ಉಡುಪಿಗೆ ಸ್ವಾಗತಿಸಿದ್ದಾರೆ. ಈ ವಿಚಾರ ಸಂಬಂಧ ಪಟ್ಟಂತೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ.

See also  ಬಂಟ್ವಾಳ: ಪತ್ನಿಯ ಆತ್ಮಹತ್ಯೆಗೆ ಯುವಕನೊಬ್ಬನ ಕೈವಾಡದ ಶಂಕೆ ! ಪತಿಗೆ ಮೂಡಿದ ಸಂಶಯಕ್ಕೆ ಇಲ್ಲಿದೆ ಕಾರಣ!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget