ಕರಾವಳಿ

ಉಡುಪಿ: ಮಹಿಳಾ ಕಾಲೇಜಿನ ಟಾಯ್ಲೆಟ್‌ನಲ್ಲಿ ವಿಡಿಯೋ ಚಿತ್ರೀಕರಣ, ಸಂತ್ರಸ್ತ ವಿದ್ಯಾರ್ಥಿನಿಯಿಂದ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ನ್ಯೂಸ್ ನಾಟೌಟ್: ರಾಜ್ಯವ್ಯಾಪಿ ಸುದ್ದಿಯಾದ ಉಡುಪಿ ಮಹಿಳಾ ಕಾಲೇಜಿನ ಟಾಯ್ಲೆಟ್‌ನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ವಿಚಾರಣೆ ತೀವ್ರ ಗತಿಯಲ್ಲಿ ಸಾಗಿದೆ. ಇದೀಗ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಸಂತ್ರಸ್ತೆಯಾದ ಯುವತಿಯ ಹೇಳಿಕೆಯನ್ನು ಉಡುಪಿ ಪೊಲೀಸರು ಪಡೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳದಲ್ಲಿ ಆಪರೇಟ್ ಆಗುತ್ತಿದ್ದ ಮೊಬೈಲ್‌ಗಳ ಕಾಲ್ ಡಿಟೇಲ್‌ ಬಗ್ಗೆ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕಾಲೇಜು ಪರಿಸರದ ಸಿಸಿಟಿವಿ ಫೂಟೇಜುಗಳನ್ನು ವಶಕ್ಕೆ ಪಡೆದು ವಿಚಾರಿಸಲಾಗುತ್ತಿದೆ. ಸಂಶಯಾಸ್ಪದ ವ್ಯಕ್ತಿಗಳು ಕಾಲೇಜ್ ಕಂಪೌಂಡ್ ಪರಿಸರದಲ್ಲಿ ತಿರುಗುತ್ತಿದ್ದ ಮಾಹಿತಿ ಕೂಡ ಸಿಕ್ಕಿರುವುದರಿಂದ

ವಶಕ್ಕೆ ಪಡೆದ ಮೊಬೈಲ್‌ಗಳನ್ನ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ. ಐಜಿಪಿ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರ ತನಿಖೆ ಚುರುಕುಗೊಂಡಿದೆ.

Related posts

ಗಂಡನ ಹತ್ಯೆ ಮಾಡಿದವರನ್ನು ಎನ್‌ಕೌಂಟರ್ ಮಾಡಿ

ಸುಳ್ಯ : ಒಂದು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ತರಗತಿಯ ಸಮಾರೋಪ ಸಮಾರಂಭ ,ಪ್ರಮಾಣ ಪತ್ರ ವಿತರಣೆ

ಬಂಟ್ವಾಳ: ಗುಡ್ಡ ಕುಸಿದು ರಸ್ತೆಗೆ ಉರುಳಿದ ಬೃಹತ್‌ ಬಂಡೆ..! ,ಲೊರೊಟ್ಟೊ ಜಂಕ್ಷನ್‌ನಿಂದ ಮಹಲ್ ತೋಟ ಸಂಪರ್ಕ ಕಡಿತ