ಕರಾವಳಿಕ್ರೈಂ

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ಸಿಗುವುದೇ? ಜಾಮೀನು ಅರ್ಜಿ ಸಲ್ಲಿಸಿದ್ಯಾರು..?

ನ್ಯೂಸ್ ನಾಟೌಟ್: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಂದಿದ್ದ ಆರೋಪಿ ಪರ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಸಿದ ಘಟನೆ ಇಂದು(ಡಿ.16) ರಂದು ನಡೆದಿದೆ.

ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್‌ ಚೌಗುಲೆ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದು, ಈತನ ಪರವಾಗಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ ಎಮದು ವರದಿ ತಿಳಿಸಿದೆ.

ಆರೋಪಿ ಪ್ರವೀಣ್‌ ಚೌಗುಲೆ ನ್ಯಾಯಾಂಗ ಬಂಧನವನ್ನು ಕೋರ್ಟ್‌ ಡಿಸೆಂಬರ್‌ 18ರ ವರೆಗೆ ವಿಸ್ತರಿಸಿದ್ದು, ಈ ನಡುವೆಯೇ ಆರೋಪಿ ಪರ ವಕೀಲರಾದ ಕೆ.ಎಸ್.​ಎನ್ ರಾಜೇಶ್​ ಎನ್ನುವವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಜಾಮೀನು ಅರ್ಜಿಗೆ ಡಿಸೆಂಬರ್ 20ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
2023ರ ನವೆಂಬರ್‌ 12 ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಉಡುಪಿಯಲ್ಲಿ ನಾಲ್ವರ ಸಾವಿನಿಂದ ರಕ್ತದ ಕೋಡಿ ಹರಿದಿತ್ತು. ಒಂದು ಸಂಬಂಧದ ಬಿರುಕಿನಿಂದ ಒಬ್ಬನ ಕೋಪದಿಂದ ನಾಲ್ವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ದೀಪಾವಳಿ ಹಬ್ಬದ ದಿನ ಉಡುಪಿ ಜಿಲ್ಲೆಯ ನೇಜಾರಿನ ಮನೆಗೆ ನುಗ್ಗಿದ ಹಂತಕ ತಾಯಿ ಹಸೀನಾ (46) ಆಕೆಯ ಮಕ್ಕಳಾದ ಅಫ್ನಾನ್ (23), ಅಯ್ನಾಜ್ (21), ಮತ್ತು ಅಸೀಮ್ (14) ದುಷ್ಕರ್ಮಿಯ ಇರಿದು ಸ್ಥಳದಿಂದ ಪರಾರಿಯಾಗಿದ್ದ. ಘಟನೆಯಲ್ಲಿ ನಾಲ್ವರು ಕೊನೆಯುಸಿರೆಳೆದಿದ್ದರು.

Related posts

ಮನೆಯ ಹಂಚು ತೆಗೆದು ಬೆಡ್‌ರೂಂ ಗೆ ನುಗ್ಗಿ ಲೈಂಗಿಕ ಕಿರುಕುಳ..!,ಮಹಿಳೆ ಕಿರುಚುವ ವೇಳೆ ಕಾಮುಕ ಸ್ಥಳದಿಂದ ಪರಾರಿ..!ಆ ಒಂದು ವಸ್ತುವಿನಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದರು..ಆ ವಸ್ತು ಯಾವುದು?

ಬೆಂಗಳೂರು: ಹಳಿತಪ್ಪಿದ ರೀ ರೈಲ್..! ಮೆಟ್ರೋ ಸಂಚಾರ ಅಸ್ತವ್ಯಸ್ತ! ಮುಂದೇನಾಯ್ತು?

“30 ವರ್ಷದಿಂದ ಅನ್ನ, ನೀರು ಕೊಡದೆ ಬಿಸಿಲಿನಲ್ಲಿ ಕೂರಿಸಿದ್ದಾರೆ, ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ..!” ಸರ್ಕಾರಿ ಕನ್ನಡ ಶಾಲೆ ಮುಖ್ಯ ಶಿಕ್ಷಕಿ ಮೇಲೆ ಗ್ರಾಮದೇವತೆ ಆವಾಹನೆ, ವಿಡಿಯೋ ವೈರಲ್