ಕರಾವಳಿ

ಕ್ಯಾನ್ಸರ್ ಪೀಡಿತ ತಾಯಿಗೆ ಪಿಯುಸಿ ಮಾರ್ಕ್ ಗಿಫ್ಟ್

ನ್ಯೂಸ್ ನಾಟೌಟ್: ಒಂದು ಕಡೆ ಕ್ಯಾನ್ಸರ್ ಪೀಡಿತ ತಾಯಿಯ ನೋವು, ಮತ್ತೊಂದೆಡೆ ಕಿತ್ತು ತಿನ್ನುವ ಬಡತನ, ಈ ಎಲ್ಲದರ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿಯ ವಿದ್ಯಾರ್ಥಿಯೊಬ್ಬರು 584 (97.33) ಅಂಕ ಪಡೆದು ಪ್ರಚಂಡ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿ ಹೆಸರು ಕಾರ್ತಿಕ್ ಶೆಣೈ , ಇವರು ಉಡುಪಿಯ ಪ್ರತಿಷ್ಠಿತ ಎಂಜಿಎಂ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ. ಕಾರ್ತಿಕ್ ತಾಯಿ ಕಳೆದ ಒಂದೂವರೆ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚಾಗಿದೆ. ಇಡೀ ಕುಟುಂಬ ಈಗ ಭಾರಿ ಆರ್ಥಿಕ ಹಿನ್ನಡೆಯಲ್ಲಿದೆ. ಹೀಗಿದ್ದರೂ ಈ ವಿದ್ಯಾರ್ಥಿ ನೋವ ನುಂಗಿ ಶೈಕ್ಷಣಿಕ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Related posts

ಸುಳ್ಯ : ಎನ್ನೆಂಪಿಯುಸಿಯಲ್ಲಿ ‘ವಾಚನಾಭಿರುಚಿ,ಬರಹ ಕಲೆ’ ಕುರಿತು ಕಾರ್ಯಕ್ರಮ,ಪುಸ್ತಕದೊಂದಿಗೆ ಸ್ನೇಹ ಬೆಳೆಸಿಕೊಂಡವರಿಗೆ ಒಂಟಿತನ ಕಾಡುವುದಿಲ್ಲ-ಉದಯ ಭಾಸ್ಕರ್ ಸುಳ್ಯ

ದೇವಚಳ್ಳ ಕ್ರಿಕೆಟ್‌: ಗೆದ್ದ ಹಣ ಶಾಲೆಗೆ ಕೊಟ್ಟು ಮಾದರಿಯಾದ ಮರ್ಕಂಜ ತಂಡ

ಮೊಬೈಲ್ ಚಾರ್ಜರ್ ಎರಡೇ ಬಣ್ಣದಲ್ಲಿ ಯಾಕೆ ಇರುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ…