ಉಡುಪಿಕರಾವಳಿಕ್ರೈಂವೈರಲ್ ನ್ಯೂಸ್

ಉಡುಪಿ: ಬೈಕ್ ಗೆ ಗುದ್ದಿ ಎಳೆದೊಯ್ದ ರಭಸಕ್ಕೆ ಈಚರ್ ಲಾರಿ ಬೆಂಕಿಗಾಹುತಿ..! ಬೈಕ್ ಸವಾರ ಸಾವು..!

ನ್ಯೂಸ್ ನಾಟೌಟ್: ಉಡುಪಿಯ ಉದ್ಯಾವರ ಗುಡ್ಡೆಅಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು(ಜ.11) ಮುಂಜಾನೆ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಈಚರ್ ಲಾರಿ ಹೊತ್ತಿ ಉರಿದಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಬೈಕ್ ಸವಾರ ಕೊರಂಗ್ರಪಾಡಿ ನಿವಾಸಿ ಅವಿನಾಶ್ ಆಚಾರ್ಯ( 19) ಎಂದು ಗುರುತಿಸಲಾಗಿದೆ.

ಗುಜರಾತ್ ಕಡೆಯಿಂದ ಕೇರಳ ಕಡೆಗೆ ಬರುತ್ತಿದ್ದ ಈಚರ್ ಲಾರಿ ಎದುರಿನಲ್ಲಿ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸವಾರ ಅವಿನಾಶ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಇದೇ ವೇಳೆ ಲಾರಿಯು ಬೈಕನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಪರಿಣಾಮ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬೆಂಕಿ ಲಾರಿಗೆ ತಗಲಿದ್ದು ಬಳಿಕ ಬೆಂಕಿಯ ಕೆನ್ನಾಲಿಗೆ ಇಡೀ ಲಾರಿ ಮತ್ತು ದ್ವಿಚಕ್ರ ವಾಹನ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಉಡುಪಿ ಸಂಚಾರ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
.

Click

https://newsnotout.com/2025/01/kerala-misbehaviour-kannada-news-allegation-case-registered-s/
https://newsnotout.com/2025/01/naxal-surrender-issue-weapon-found-kannada-news-d/

Related posts

ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ಕಾರ್ಯಾಚರಣೆ, ಇಲ್ಲಿವೆ ಸಮುದ್ರದಲ್ಲಿ ನಡೆದ ಸಾಹಸಗಳ ಪೋಟೊಗಳು

ಪ್ರವೀಣ್ ಹಂತಕರ ಹೆಡೆಮುರಿ ಕಟ್ಟಿದ ‘ಸಿಂಗಂ’ ಅಲೋಕ್ ಯಾರು?

ಸುಬ್ರಹ್ಮಣ್ಯ: ನ.28 – ನ.29 ಮದ್ಯ ಸಿಗಲ್ಲ