ಕರಾವಳಿಕ್ರೈಂವೈರಲ್ ನ್ಯೂಸ್

ಉಡುಪಿಯಲ್ಲಿ ಸಮುದ್ರಪಾಲಾಗಿದ್ದ ಬ್ಯಾಂಕ್ ಉದ್ಯೋಗಿ..! ಬೆಂಗಳೂರಿನಿಂದ ಬಂದವನ ಮೃತದೇಹ ಪತ್ತೆ..!

214

ನ್ಯೂಸ್ ನಾಟೌಟ್: ಸಮುದ್ರ ಪಾಲಾಗಿದ್ದ ದೆಹಲಿ ಮೂಲದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ನಿತೀನ್(35) ಎಂಬಾತನ ಮೃತದೇಹ ಇಂದು(ಜ.29) ಮಧ್ಯಾಹ್ನ ವೇಳೆ ಮಲ್ಪೆ ಸಮುದ್ರದಲ್ಲಿ ಪತ್ತೆಯಾಗಿದೆ.

ಇವರು ಎರಡು ದಿನಗಳ ಹಿಂದೆ ಅಂದರೆ, ಜ.೨೭ ರಂದು ಕೋಡಿಬೆಂಗ್ರೆಯ ಡೆಲ್ಟಾ ಬೀಚ್ ಎಂಬಲ್ಲಿ ಸಮುದ್ರ ಪಾಲಾಗಿದ್ದರು.
ಜ.26 ರಂದು ಇಬ್ಬರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ನಿತೀನ್, ಜ.27ರಂದು ಅಪರಾಹ್ನ 3.30ರ ಸುಮಾರಿಗೆ ಡೆಲ್ಟಾ ಬೀಚ್ ನಲ್ಲಿ ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗಳಿಂದ ಕೊಚ್ಚಿಕೊಂಡು ಹೋದ ನಿತೀನ್ ನಾಪತ್ತೆಯಾಗಿದ್ದರು. ಇವರ ಮೃತದೇಹಕ್ಕಾಗಿ ಎರಡು ದಿನಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು.

ಇವರ ಪತ್ನಿ ಮಕ್ಕಳು ಹಾಗೂ ಮನೆಯವರು ಮಲ್ಪೆಗೆ ಆಗಮಿಸಿದ್ದರು. ಬೋಟಿನವರ ಮೂಲಕ ದೊರೆತ ಮಾಹಿತಿಯಂತೆ 12 ಮಾರು ದೂರದ ಸಮುದ್ರದಲ್ಲಿ ಮೃತದೇಹ ಪತ್ತೆಯಾಗಿದ್ದು, ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ತೆರಳಿ ಮೃತದೇಹವನ್ನು ತೀರಕ್ಕೆ ತರುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ನದಿಗೆ ಬಿದ್ದ ಆಟೋ ರಿಕ್ಷಾ, ಚಾಲಕ ಪ್ರಾಣಪಾಯದಿಂದ ಪಾರು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget