ನ್ಯೂಸ್ ನಾಟೌಟ್: ಉಬರಡ್ಕದ ಕುತ್ತಮೊಟ್ಟೆ ಸೂರ್ಯ ಮನೆ ಎಂಬಲ್ಲಿ ಬೈ ಹುಲ್ಲು ಸಾಗಿಸುತ್ತಿದ್ದ ಪಿಕಪ್ ಬೆಂಕಿ ಅವಘಡಕ್ಕೆ ತುತ್ತಾಗಿದೆ. ಬೈ ಹುಲ್ಲು ಸಹಿತ ವಾಹನ ಸುಟ್ಟು ಹೋಗಿದೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಂಕಿ ಹೊತ್ತುವುದಕ್ಕೆ ಕಾರಣ ಏನು ಅನ್ನುವುದರ ಬಗ್ಗೆ ಇದೀಗ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.