ಕರಾವಳಿಸುಳ್ಯ

ಸುಳ್ಯ: ನಂಬರ್ ಪ್ಲೇಟ್ ತೆಗೆದು  ದ್ವಿಚಕ್ರ ವಾಹನಗಳಲ್ಲಿ ಸಂಚಾರ; ಪೊಲೀಸರಿಂದ ತಪಾಸಣೆ

ನ್ಯೂಸ್ ನಾಟೌಟ್ : ಬಹುತೇಕ ದ್ವಿಚಕ್ರ ವಾಹನಗಳ ನಂಬರ್‌ಪ್ಲೇಟ್‌ಗಳಲ್ಲಿ ನಂಬರ್‌ಗಳೇ ಕಾಣಸಿಗುವುದಿಲ್ಲ! ನಂಬರ್ ಪ್ಲೇಟ್ ಇಲ್ಲದೇ ದ್ವಿಚಕ್ರ ವಾಹನಗಳನ್ನು ಓಡಿಸುವ ಖಯಾಲಿ ಇತ್ತೀಚೆಗೆ ಜಾಸ್ತಿಯಾಗಿದೆ. ಇದನ್ನ ಮನಗಂಡು ಸುಳ್ಯ ನಗರದಲ್ಲಿ ಅನುಮಾನಾಸ್ಪದವಾಗಿ  ನಂಬರ್ ಪ್ಲೇಟ್ ತೆಗೆದು  ಸಂಚರಿಸುತ್ತಿದ್ದ   ದ್ವಿಚಕ್ರ ವಾಹನಗಳನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ. ಸುಮಾರು ಮೂವತ್ತಕ್ಕು ಹೆಚ್ಚು ವಾಹನಗಳನ್ನು ತಪಾಸಣೆ ಮಾಡಿ ವಿಚಾರಿಸಿದ್ದಾರೆ.

ಒಬ್ಬ ಯುವಕನ ಬೈಕ್ ನ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಫ್ಯಾಷನ್ ಬೈಕ್ ಗಳಲ್ಲಿ ನಂಬರ್ ಪ್ಲೇಟ್ ಅಳವಡಿಸುವ ಸಂದರ್ಭದಲ್ಲಿ ಬೈಕ್ ನ ಹಿಂಬಾಗದ ಮಡ್ಗಾಡ್೯ ಒಳಭಾಗದಲ್ಲಿ ಮಡಚಿ ಇಡಲು ಸಾಧ್ಯವಾಗುವ ರೀತಿಯಲ್ಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಲಾಗಿತ್ತು. ಪೊಲೀಸರು ಬೈಕ್ ನ ಚಾಲಕನಲ್ಲಿ ವಿಚಾರಿಸಿದಾಗ ಫ್ಯಾಷನ್ ಗಾಗಿ ನಂಬರ್ ಪ್ಲೇಟ್ ತೆಗೆಯಲಾಗಿದೆ ಎಂದು ಸವಾರರು ಹೇಳಿದ್ದಾರೆ. ಬಳಿಕ ಪೊಲೀಸರು ಅವರ ಸಂಪೂರ್ಣ ಮಾಹಿತಿ ಪಡೆದು ವಿಚಾರಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

Related posts

ಭಾಷೆ ಬೆಳೆದರಷ್ಟೇ ನಮ್ಮ ಸಂಸ್ಕೃತಿ ಬೆಳೆಯಲು ಸಾಧ್ಯ: ಸಚಿವ ವಿ.ಸುನಿಲ್ ಕುಮಾರ್

ಬಿಜೆಪಿಯ ಮತ್ತೋರ್ವ ಮಾಜಿ ಸಿಎಂ ಕಾಂಗ್ರೆಸ್ ಸೇರ್ತಾರಾ..? ಯಾರು ಕರಾವಳಿಯ ಆ ಮಾಜಿ ಕೇಂದ್ರ ನಾಯಕ?

ಪುತ್ತೂರು: ಅಡಿಕೆ ಕಳ್ಳರಿಂದ ಲಕ್ಷ – ಲಕ್ಷ ಮೌಲ್ಯದ ಸೊತ್ತು ವಶಕ್ಕೆ..! ಬಂಧನವಾದ ಆ ಖತರ್ನಾಕ್ ಕಳ್ಳರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ