ಕರಾವಳಿಕ್ರೈಂ

ಮೂಡುಬಿದಿರೆ: ಹಾಡಹಗಲೇ ಎರಡು ಮನೆಗಳಿಗೆ ನುಗ್ಗಿ ಚಿನ್ನಾಭರಣ, ನಗದು ಕಳವು

395

ನ್ಯೂಸ್ ನಾಟೌಟ್: ಮೂಡುಬಿದಿರೆ ನಗರದ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಎರಡು ಮನೆಗಳಿಗೆ ಭಾನುವಾರ ಬೆಳಗ್ಗಿನ ವೇಳೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ಬ್ಯಾಂಕ್ ಉದ್ಯೋಗಿಗಳಾಗಿರುವ ರತ್ನಾಕರ್ ಜೈನ್ ಮತ್ತು ಅವರ ಪಕ್ಕದ ಮನೆಯ ಧಿರೇಂದ್ರ ಹೆಗ್ಡೆ ಅವರು ಕುಟುಂಬ ಸಮೇತ ಬೆಳಗ್ಗೆ 8 ಗಂಟೆಯ ವೇಳೆಗೆ ಪೂಜೆ ಸಲ್ಲಿಸಲು ಬಸದಿಗೆ ತೆರಳಿದ್ದರು . ಇದೇ ಸಂದರ್ಭಕ್ಕೆ ಕಾದು ಕೂತು ಹೊಂಚು ಹಾಕಿದ್ದ ಕಳ್ಳರು ರತ್ನಾಕರ್ ಜೈನ್ ಅವರ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ 25 ವವನ್ ಚಿನ್ನ ಮತ್ತು 20 ಸಾವಿರ ನಗದು ಹಾಗೂ ಧೀರೇಂದ್ರ ಹೆಗ್ಡೆ ಅವರ ಮುಂಬಾಗಿಲಿನ ಚಿಲಕ ಮುರಿದು 20 ಗ್ರಾಂ ಚಿನ್ನ ಮತ್ತು 60 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಮನೋಜ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಡುಬಿದಿರೆಯ ಪೊಲೀಸ್ ನಿರೀಕ್ಷಕ ನಿರಂಜನ್ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ವೈನ್​ಶಾಪ್ ​ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೇಕೆ ಆತ..? ಅಂಗಡಿ ಸಿಬ್ಬಂದಿ ತಪ್ಪಿಸಿಕೊಂಡದ್ದೇ ರೋಚಕ! ಏನಿದು ಘಟನೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget