ಕ್ರೈಂ

ಫಸ್ಟ್ ನೈಟ್ ದಿನವೇ ಪಾಯಸದಲ್ಲಿ ನಿದ್ರೆ ಮಾತ್ರೆ ಬೆರೆಸಿ ವರರಿಗೆ ಕುಡಿಸಿದ ನವವಧುಗಳು..!ಮನೆಮಂದಿ ಗಾಢ ನಿದ್ರೆಯಲ್ಲಿದ್ದಾಗಲೇ ಚಿನ್ನಾಭರಣದೊಂದಿಗೆ ಪರಾರಿ..! ಇದೇನಿದು ಮೋಸದ ಮದುವೆ?

ನ್ಯೂಸ್ ನಾಟೌಟ್ : ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ಮದುವೆಯಾಗಿದ್ದ ಗಂಡಂದಿರಿಗೆ ಅವರ ಪತ್ನಿಯರೇ ಫಸ್ಟ್ ನೈಟ್ ದಿನ ಪಾಯಸದಲ್ಲಿ ಅಮಲು ಪದಾರ್ಥವನ್ನು ಬೆರೆಸಿದ ಘಟನೆ ವರದಿಯಾಗಿದೆ.ಮಾತ್ರವಲ್ಲ ಅತ್ತೆ- ಮಾವನಿಗೂ ಈ ಪಾಯಸ ಕೊಟ್ಟು ಗಾಢ ನಿದ್ರೆ ಮಾಡುತ್ತಿದ್ದಂತೆ ನವವಧುಗಳಿಬ್ಬರು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.

ಈ ಘಟನೆ ನಡೆದಿದ್ದು,ಉತ್ತರ ಪ್ರದೇಶದ ಹರ್ದೋಯಿ ಎಂಬಲ್ಲಿ.ಇತ್ತೀಚೆಗೆ (ನ.22 ರಂದು) ಸಹೋದರರಾದ ಕುಲ್‌ ದೀಪ್‌(30) ಹಾಗೂ ಪ್ರದೀಪ್ (29) ಸೀತಾಪುರ ಮೂಲದ ಸಹೋದರಿಯರಾದ ಆರತಿ, (23) ಪೂಜಾ (22) ಅವರನ್ನು ವಿವಾಹವಾಗಿದ್ದರು.ಮದುವೆಯೇನೋ ಕಾಳಿ ಮಾತಾ ದೇವಸ್ಥಾನದಲ್ಲಿ ಹಲವಾರು ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತ್ತು.ಆದರೆ ವಿವಾಹದ ಬಳಿಕ ಗಂಡನ ಮನೆಗೆ ಬಂದ ನವವಧುಗಳು ಮೊದಲ ರಾತ್ರಿಯಂದೇ ಮನೆಯವರಿಗೆ ಪಾಯಸವನ್ನು ಮಾಡಿಕೊಟ್ಟಿದ್ದಾರೆ.

ಇಬ್ಬರು ಸಹೋದರಿಯರು ಪಾಯಸದಲ್ಲಿ ನಿದ್ರೆ ಬರುವ ಪದಾರ್ಥ ಬೆರಸಿ ಕೊಟ್ಟಿದ್ದು, ಕೆಲ ನಿಮಿಷದ ಬಳಿಕ ಪಾಯಸ ಸೇವಿಸಿದ ಗಂಡಂದಿರು ಹಾಗೂ ಅತ್ತೆ – ಮಾವ ನಿದ್ರೆಗೆ ಜಾರಿದ್ದಾರೆ. ಅತ್ತೆ ಬಳಿಯಲ್ಲಿ ಭಯಂಕರ ಚಿನ್ನವಿದೆ ಎಂದು ಮೊದಲೇ ಅರಿತಿದ್ದ  ಅತ್ತೆ ನಗದು, ಆಭರಣಗಳು ಸೇರಿದಂತೆ ಮೊಬೈಲ್‌ಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇತ್ತ ನಿದ್ರೆಗೆ ಜಾರಿದ್ದ ಮನೆಯವರು ಗುರುವಾರ(ನ.23 ರಂದು) ಮಧ್ಯಾಹ್ನ ಎದ್ದು ನೋಡಿದಾಗ ಮನೆಯಿಂದ ನವವಧುಗಳ ದರೋಡೆ ಕೃತ್ಯ ಬೆಳಕಿಗೆ ಬಂದಿದೆ. ಇದಾದ ಬಳಿಕ ಕುಲ್‌ ದೀಪ್‌ ಹಾಗೂ ಪ್ರದೀಪ್‌ ಪೊಲೀಸರಿಗೆ ಪತ್ನಿಯರು ಹಾಗೂ ದಲ್ಲಾಳಿ ವಿರುದ್ಧ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿತ್ತು? :  ರಾಜ್‌ ಕುಮಾರ್‌ ಎಂಬ ದಲ್ಲಾಳಿಯಲ್ಲಿ  ಪ್ರದೀಪ್‌ – ಕುಲ್‌ ದೀಪ್‌ ಅವರ ತಾಯಿ ಸೂಕ್ತ ವಧುವಿನ ಸಂಬಂಧ ಹುಡುಕಲು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್‌ ಕುಮಾರ್ ಕೆಲ ದಿನಗಳ ನಂತರ ಆರತಿ ಹಾಗೂ ಪೂಜಾ ಎನ್ನುವವರ ಸಂಬಂಧದ ಬಗ್ಗೆ ಹೇಳಿದ್ದಾರೆ. ನಮ್ಮ ಮದುವೆಯನ್ನು ನಿಗದಿಪಡಿಸಿದ ಬಳಿಕ ಬುಧವಾರ ಬೆಳಗ್ಗೆ ಇಬ್ಬರು ಸಹೋದರಿಯರನ್ನು ನಮ್ಮ ಗ್ರಾಮಕ್ಕೆ ಕರೆತಂದರು ಮತ್ತು ಅವರ ಸೇವೆಗಾಗಿ(‌ ಸಂಬಂಧ ಹುಡುಕಿದ್ದಕ್ಕಾಗಿ) ನಮ್ಮ ತಾಯಿಯಿಂದ  80,000 ತೆಗೆದುಕೊಂಡು ಹಿಂತಿರುಗಿದರು ಎಂದು ದೂರಿನಲ್ಲಿ ಹೇಳಿದ್ದಾರೆ.ಸದ್ಯ ಈ ಬಗ್ಗೆ ತಾಂಡಿಯಾವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರತಿ ಹಾಗೂ ಪೂಜಾ ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳದು ಬಂದಿದೆ.

Related posts

ಟ್ರಾಫಿಕ್‌ ನಡುವೆ ಬೆತ್ತಲಾಗಿ ಓಡಿದ ವಿದೇಶಿ ಪ್ರಜೆ..! ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿದ್ದೇಕೆ?

ಗೋಳಿತೊಟ್ಟು: ಯುವ ಪ್ರಭಾರ ಮುಖ್ಯೋಪಾಧ್ಯಾಯ, ಖ್ಯಾತ ನಿರೂಪಕ ಹಠಾತ್ ಸಾವು, ಜೆಸಿಐ ಪೂರ್ವ ವಲಯ ಉಪಾಧ್ಯಕ್ಷರಾಗಿ 25 ಗಂಟೆ ತರಬೇತಿ ನೀಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದವರಿಗೆ ಆಗಿದ್ದೇನು..?

ಸುಳ್ಯ: ಆಟೋ ರಿಕ್ಷಾ – ಓಮ್ನಿ ಕಾರಿನ ನಡುವೆ ಭೀಕರ ಅಪಘಾತ, ಆಟೋ ಚಾಲಕ ಸಾವು