ಕರಾವಳಿ

ಸೆಲೆಬ್ರಿಟಿಗಳಿಗೆ ಟ್ವಿಟ್ಟರ್ ಶಾಕ್! ರಾತ್ರೋ ರಾತ್ರಿ ಬ್ಲೂಟಿಕ್ ಮಾಯ!

351

ನ್ಯೂಸ್ ನಾಟೌಟ್ : ಇಷ್ಟು ದಿನ ಸೆಲೆಬ್ರಿಟಿಗಳ ಟ್ವಿಟ್ಟರ್ ಖಾತೆಯಲ್ಲಿ ಬ್ಲೂ ಟಿಕ್ ಮಾರ್ಕ್ ಕಾಣಿಸುತ್ತಿತ್ತು.ಆದರೀಗ ಅನೇಕ ಸೆಲೆಬ್ರಿಟಿಗಳ ಬ್ಲೂ ಟಿಕ್ ಅನ್ನು ಟ್ವಿಟ್ಟರ್ ಸಂಸ್ಥೆ ತೆಗೆದುಹಾಕಿದೆ. ಬ್ಲೂಟಿಕ್ ಪಡೆಯಲು ಶುಲ್ಕ ಪಾವತಿಸದ ಕಾರಣ ಬಹುತೇಕ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿದೆ!

ಸೆಲೆಬ್ರಿಟಿಗಳ ಪ್ರೊಪೈಲ್​ನಲ್ಲಿದ್ದ ಬ್ಲೂ ಟಿಕ್​ ತೆಗೆದು ಹಾಕಲು ಮುಖ್ಯ ಕಾರಣ ಎಂದರೆ ಅದು ಟ್ವಿಟರ್​ನ ಮಾಲೀಕ ಎಲಾನ್​ ಮಸ್ಕ್​ ಜಾರಿಗೆ ತಂದಿರುವ ನೂತನ ನಿಯಮ ಎಂದು ಹೇಳಲಾಗಿದೆ.ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಬ್ಲೂಟಿಕ್ ಹೊಂದಲು ಶುಲ್ಕ ವಿಧಿಸಲಾಗಿತ್ತು. ಇದೀಗ ಶುಲ್ಕ ಪಾವತಿಸದೆ ಇದ್ದವರ ಬ್ಲೂ ಟಿಕ್ ಮಾಯವಾಗಿದೆ. ಟ್ವಿಟ್ಟರ್ ನೋಡಿದ ಬಹುತೇಕರಿಗೆ ಬ್ಲೂ ಟಿಕ್ ಶಾಕ್ ನೀಡಿದ್ದು, ಸೆಲೆಬ್ರಿಟಿಗಳಿಗೆ ಬಿಸಿ ಮುಟ್ಟಿದೆ.

ತಮ್ಮ ಖಾತೆಯಲ್ಲಿನ ಬ್ಲೂ ಟಿಕ್​ ಉಳಿಸಿಕೊಳ್ಳಬೇಕಾದರೆ ಸೆಲೆಬ್ರಿಟಿಗಳು ಸಬ್​ಸ್ಕ್ರಿಪ್ಷನ್​ ಮೊತ್ತವನ್ನು ಪಾವತಿಸಬೇಕು. ಚಂದಾದಾರಿಕೆ ಮೊತ್ತವನ್ನು ಪಾವತಿಸದೆ ಇರುವವರ ಖಾತೆಗಳಿಂದ ಟ್ವಿಟರ್​ ಬ್ಲೂ ಟಿಕ್​ ತೆಗೆದು ಹಾಕಿದೆ.ಇನ್ನು ಟ್ವಿಟರ್​ನಲ್ಲಿ ತಮ್ಮ ಖಾತೆಯಲ್ಲಿನ ಬ್ಲೂ ಟಿಕ್ ಉಳಿಸಿಕೊಳ್ಳಲು ಸಬ್​ಸ್ಕ್ರಿಪ್ಸನ್​ ಮೊತ್ತ ಪಾವತಿಸಬೇಕಾಗುತ್ತದೆ.

See also  ಮತ್ತೆ ಮಲ್ಪೆ ಬೀಚ್ ನ  ಆಕರ್ಷಣೆ ಹೆಚ್ಚಿಸಿದ ರಾಜ್ಯದ ಮೊದಲ ‘ತೇಲುವ ಸೇತುವೆ’,ಅಲೆಗಳ ಮೇಲೆ ಆಟವಾಡಲು ತೇಲುವ ಸೇತುವೆ ರೆಡಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget