ಕ್ರೈಂರಾಜ್ಯ

ನಿಧಿ ಆಸೆಗಾಗಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಹೋದವರಿಗೆ ಸಿಕ್ಕಿದ್ದೇನು..? ಕಿಡಿಗೇಡಿಗಳು ಅರ್ಧಕ್ಕೆ ಬಿಟ್ಟು ಪರಾರಿಯಾದದ್ದೇಕೆ..?

ನ್ಯೂಸ್‌ ನಾಟೌಟ್‌: ನಿಧಿ ಆಸೆಗಾಗಿ ಕಿಡಿಗೇಡಿಗಳ ತಂಡವೊಂದು ದೇವಸ್ಥಾನದ ಬಳಿ ಭೂಮಿಯನ್ನು ಅಗೆದು ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಬನವಾಸಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕೆಲ ಕಿಡಿಗೇಡಿಗಳು ನಿಧಿ ಶೋಧ ನಡೆಸಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ನಿಧಿಗಾಗಿ ಮಧ್ಯರಾತ್ರಿ ದೇವಸ್ಥಾನದ ಬಳಿ ಮೂರು ಕಡೆ ಬಂಡೆ ಕೊರೆದಿದ್ದಾರೆ. ಅರಿಶಿನ, ಕುಂಕುಮ, ತೆಂಗಿನಕಾಯಿ ಹಾಗೂ ವಸ್ತ್ರವನ್ನಿಟ್ಟು ಕಿಡಿಗೇಡಿಗಳು ಪೂಜೆ ಮಾಡಿದ್ದಾರೆ. ಬಳಿಕ ನಿಧಿ ಸಿಗದೇ ಅರ್ಧಕ್ಕೆ ಬಿಟ್ಟು ಪರಾರಿಯಾಗಿದ್ದಾರೆ.

ದೇವಸ್ಥಾನಕ್ಕೆ ಪೂಜೆ ಮಾಡಲು ಬಂದ ಅರ್ಚಕರು ನಿಧಿಗೆ ಶೋಧ ನಡೆದಿರುವುದನ್ನು ಕಂಡು ಬಿಚ್ಚಿಬಿದ್ದಿದ್ದಾರೆ. ದೇವಸ್ಥಾನಕ್ಕೆ ಗ್ರಾಮಸ್ಥರೆಲ್ಲ ಭೇಟಿ ನೀಡಿದ್ದು ದೇವಸ್ಥಾನಕ್ಕೆ ಭದ್ರತೆ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related posts

ಯಾರಿಲ್ಲದ ಸಮಯ ನೋಡಿ ವಿದ್ಯಾರ್ಥಿನಿ ಮೇಲೆ ಕೈ ಹಾಕಿದ ಕಂಡೆಕ್ಟರ್‌..!

ವಿವಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಸ್ವೀಕಾರ..! ಪ್ರಾಧ್ಯಾಪಕಿ ಸಹಿತ 10 ಮಂದಿ ಅರೆಸ್ಟ್..!

ಸುಬ್ರಹ್ಮಣ್ಯ – ಗುಂಡ್ಯ: ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು