ರಾಜ್ಯ

ತುಮಕೂರು: ವೀರಾಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ, ಶ್ರೀಕ್ಷೇತ್ರ ಸಿಗೇಪಾಳ್ಯದಲ್ಲಿ ತುಂಬಿ ತುಳುಕಿದ ಭಕ್ತರು

31
Spread the love

ನ್ಯೂಸ್ ನಾಟೌಟ್ : ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಶ್ರೀಕ್ಷೇತ್ರ ಸಿಗೇಪಾಳ್ಯದಲ್ಲಿ ವೀರಾಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮವು ಏ.24 ಅದ್ದೂರಿಯಾಗಿ ನಡೆಯಿತು.

ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು. ಇದಕ್ಕೂ ಮೊದಲು ಏ.23ಕ್ಕೆ ಮಂಗಳವಾರ ಗೋಧೂಳಿ ಲಗ್ನದಲ್ಲಿ ಗಣಪತಿ ಪೂಜೆ, ಗಂಗೆಪೂಜೆ, ರುದ್ರಾಭಿಷೇಕ ಹೋಮ, ಪೂರ್ಣಾಹುತಿ, ಶ್ರೀ ಸ್ವಾಮಿಯವರ ವಿಶೇಷ ಅಲಂಕಾರ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮವು ಭಕ್ತರ ಪಾಲ್ಗೊಳ್ಳುವಿಕೆ ಮೂಲಕ ಸಂಪನ್ನಗೊಂಡಿತು.

ಶ್ರೀ ದೇವಾನ್ ದೇವತೆಗಳ ಕುಟೀರ ಹಾಗೂ ಶ್ರೀ ಶಿವಲಿಂಗಸಮೇತ ವಜ್ರಾಯುಧದ ವೀರಾಂಜನೇಯ ಸ್ವಾಮಿಯ ಎಂಟನೇ ವರ್ಷದ ಬ್ರಹ್ಮರಥೋತ್ಸವ ಗಮನ ಸೆಳೆಯಿತು. ನಾಲ್ಕು ಹಳ್ಳಿಯ ಗ್ರಾಮಸ್ಥರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

See also  ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಭೇಟಿಯಾದ ಪ್ರತಾಪ್ ಸಿಂಹ..! ಮಾಜಿ ಸಂಸದನ ವಿರುದ್ಧ ಹಲವರ ಆಕ್ರೋಶ..!
  Ad Widget   Ad Widget   Ad Widget