Latestಕ್ರೈಂರಾಜ್ಯ

ಬೀದಿ ನಾಯಿಗಳ ದಾಳಿಯಿಂದ ರಕ್ಷಿಸುವಂತೆ ಕಿರುಚಿದರೂ ಜೊತೆಗಿದ್ದ ಅಪ್ಪನಿಗೆ ಕೇಳಲೇ ಇಲ್ಲ..! ಮಗಳನ್ನು ಕಳೆದುಕೊಂಡ ಕಿವುಡ ಅಪ್ಪ-ಅಮ್ಮನ ಮನಕಲಕೋ ಕಥೆ..!

704

ನ್ಯೂಸ್ ನಾಟೌಟ್: ಬೀದಿ ನಾಯಿಗಳು 6 ವರ್ಷದ ಬಾಲಕಿಯನ್ನು ತೀವ್ರವಾಗಿ ಕಚ್ಚಿ ಭೀಕರವಾಗಿ ಸಾಯಿಸಿವೆ. ಬಾಲಕಿ ತಂದೆಯ ಹಿಂದೆಯೇ ಇದ್ದರೂ ಮಗಳು ಚೀರಾಡಿದರೂ ಆತನಿಗೆ ಕೇಳಿಸಿಯೇ ಇಲ್ಲ.ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಅಯ್ಯನಬಾವಿ ಭೋವಿ ಕಾಲೋನಿಯಲ್ಲಿ ಈ ದುರುಂತ ನಡೆದಿದೆ.

ಬೀದಿ ನಾಯಿಗಳಿಂದ ಪ್ರಾಣ ಬಿಟ್ಟ ಬಾಲಕಿಯ ಹೆಸರು ನವ್ಯಾ ಎಂದು ಗುರುತಿಸಲಾಗಿದೆ. ಮೇ.24ರ ಸಂಜೆ 5 ಗಂಟೆ ಸುಮಾರಿಗೆ ನವ್ಯಾ ತಂದೆ ಮಗಳನ್ನು ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದರು.
ತಂದೆಯ ಹಿಂದೆ ಬಾಲಕಿ ನಡೆದುಕೊಂಡು ಬರುವಾಗ ಬೀದಿ ನಾಯಿಗಳು ದಾಳಿ ಮಾಡಿವೆ. ಪಾಪ ಮಗಳು ಚೀರಾಡಿದರೂ ತಂದೆಗೆ ಮಗಳ ಕೂಗು ಕೇಳಿಸಿಯೇ ಇಲ್ಲ. ಸ್ಥಳೀಯರು ಬಂದು ಮುಟ್ಟಿ ಕರೆದಾಗ ನವ್ಯಾ ತಂದೆಗೆ ಮಗಳ ನರಳಾಟದ ದೃಶ್ಯ ಅರಿವಿಗೆ ಬಂದಿದೆ. ಅಷ್ಟರಲ್ಲಿ ರಾಕ್ಷಸ ಶ್ವಾನಗಳು 6 ವರ್ಷದ ಬಾಲಕಿಯ ತಲೆ ಹಾಗೂ ಹೊಟ್ಟೆ ಭಾಗವನ್ನು ಕಚ್ಚಿ ಎಳೆದಾಡಿದ್ದವು.

ಬೀದಿ ನಾಯಿಗಳು ಬಾಲಕಿ ನವ್ಯಾ ಮುಖ, ಕೈ, ಕಾಲು, ತೊಡೆ ಭಾಗವನ್ನು ಕಿತ್ತು ಹಾಕಿದ್ದವು. ರಕ್ತದ ಮಡುವಿನಲ್ಲಿ ಚೀರಾಡಿದ್ದನ್ನು ಕಂಡ ಸ್ಥಳೀಯರು ಕೂಡಲೇ ಬಾಲಕಿಯನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ತುಮಕೂರಿನಿಂದ ಹೆಚ್ಚಿನ ಚಿಕಿತ್ಸೆಗೆಂದು ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಮಾರ್ಗ ಮಧ್ಯೆಯೇ ಬಾಲಕಿ ಪ್ರಾಣ ಬಿಟ್ಟಿದ್ದಾಳೆ.

ನವ್ಯಾ ತಂದೆ ಮಹಲಿಂಗಯ್ಯ ಕಾಲು ಮುರಿದುಕೊಂಡಿದ್ದು, ಕಿವಿ ಕೇಳುವುದಿಲ್ಲ. ತಾಯಿ ಭಾಗ್ಯಮ್ಮನಿಗೂ ಸಹ ಕಿವಿ ಕೇಳುವುದಿಲ್ಲ. ಬೀದಿನಾಯಿಗಳು ಕುಟುಂಬದ ಒಬ್ಬಳೇ ಮಗಳನ್ನು ಕಿತ್ತುಕೊಂಡಿವೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಮೀನು ಸಾಗಿಸುತ್ತಿದ್ದ ಲಾರಿ ಪಲ್ಟಿ ..! ಮಳೆಗೆ ಶಿರಾಡಿ ಘಾಟ್ ರಸ್ತೆಯಲ್ಲಿ ಎಚ್ಚರ ವಹಿಸುವಂತೆ ಸೂಚನೆ

9 ಇಂದಿರಾ ಕ್ಯಾಂಟೀನ್‌ ಗಳನ್ನು ಲೋಕಾರ್ಪಣೆಗೊಳಿಸಿದ ಸಿಎಂ, ಶೀಘ್ರದಲ್ಲೇ ರಾಜ್ಯಾದ್ಯಂತ ಹೊಸದಾಗಿ ಇನ್ನೂ 184 ಕ್ಯಾಂಟೀನ್ ಗಳನ್ನು ಆರಂಭಿಸುತ್ತೇವೆ ಎಂದ ಸಿದ್ದರಾಮಯ್ಯ

ಶಿರಾಡಿ ಘಾಟ್ ನಲ್ಲಿ ಮಂಗಳೂರು- ಬೆಂಗಳೂರು ರಸ್ತೆ ಕುಸಿತ..! ವಾಹನ‌ ಸವಾರರಲ್ಲಿ ಆತಂಕ..!

See also  ದೇವರಕೊಲ್ಲಿ: ನಿಯಂತ್ರಣ ತಪ್ಪಿ ಕಾರು ಅಪಘಾತ, ಕಾರು ಒಳಗಡೆ ಇತ್ತು ಗಾಂಜಾ ಪ್ಯಾಕೇಟ್ ಗಳು..! ...!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget