ಕರಾವಳಿ

ಖ್ಯಾತ ದೈವ ನರ್ತಕನಿಗೆ ಹೃದಯಾಘಾತ..!ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲೇ ಕೊನೆಯುಸಿರೆಳೆದ ಅಶೋಕ್ ಬಂಗೇರ

ನ್ಯೂಸ್ ನಾಟೌಟ್ : ಕೊರಗಜ್ಜ ದೈವಾರಾಧಕಾರಾದ ಅಶೋಕ್‌ ಬಂಗೇರ ಅವರು ಹೃದ*ಯಾಘಾ*ತದಿಂದ ಕೊನೆಯುಸಿರೆಳೆದ ಕುರಿತು ವರದಿಯಾಗಿದೆ. ಶುಕ್ರವಾರ ದೈವ ನರ್ತನ ಮುಗಿಸುತ್ತಿದ್ದಂತೆ ಕಾಣಿಸಿಕೊಂಡ ಎದೆನೋವಿನಿಂದ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಉಸಿರು ಚೆಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ದೈವ ನರ್ತನದ ವೇಳೆಯೇ ಲಘುವಾಗಿ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.ಮಂಗಳೂರಿನ ಪದವಿನಂಗಡಿಯಲ್ಲಿರವ ಕೊರಗಜ್ಜನ ಸಾನಿಧ್ಯದಲ್ಲಿ ಅವರು ಕೊರಗಜ್ಜನ ಸೇವೆ ಮಾಡುತ್ತಿದ್ದರು. ಹಳೆಯಂಗಡಿ ಸಮೀಪ ನಡೆದ ರಕ್ತೇಶ್ವರಿ ದೈವ ನೇಮದಲ್ಲಿ ದೈವ ನರ್ತನ ಮಾಡುತ್ತಿರುವಾಗ ಎದೆನೋವು ಕಾಣಿಸಿಕೊಂಡಿತ್ತು.

ದೈವ ನೇಮ ಅರ್ಧಕ್ಕೆ ನಿಲ್ಲಿಸಿ, ದೈವ ವೇಷ ತೆಗೆದು ಆಸ್ಪತ್ರೆಗೆ ಅಶೋಕ ಬಂಗೇರಾ ತೆರಳಿದ್ದಾರೆ.ಬಳಿಕ ದೈವ ನರ್ತನವನ್ನು ಅಶೋಕ ಬಂಗೇರಾ ತಮ್ಮ ಪೂರ್ಣಗೊಳಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Related posts

ಗುಂಡು ಹಾರಾಟ-ಕೈ ಕಾಲಿಗೆ ಗಾಯ;ಚಿಕಿತ್ಸೆ ,ಅಣ್ಣನ ವಿರುದ್ಧವೇ ತಮ್ಮನಿಂದ ಪೊಲೀಸ್ ಠಾಣೆಗೆ ದೂರು

ವಯನಾಡು ಭೂಕುಸಿತ ಸಂತ್ರಸ್ತರ ಸಾಲ ಮನ್ನಾ ಮಾಡಲು ನಿರ್ಧರಿಸಿದ ಕೇರಳ ಬ್ಯಾಂಕ್..! 5 ದಿನದ ಸಂಬಳವನ್ನು ಪರಿಹಾರ ನಿಧಿಗೆ ನೀಡಿದ ಬ್ಯಾಂಕ್ ಉದ್ಯೋಗಿಗಳು

ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಎಷ್ಟು ಗಂಟೆಗೆ ತೀರ್ಥೋದ್ಭವ?