ಉಡುಪಿಕರಾವಳಿಪುತ್ತೂರುಮಂಗಳೂರುವೈರಲ್ ನ್ಯೂಸ್ಸಿನಿಮಾ

ತ್ರಿಲ್ಲರ್, ಹಾರರ್ ಸ್ಪರ್ಶದ ಜೊತೆ ತುಳುನಾಡಿನ ದೈವದೇವರ ನಂಬಿಕೆಯ ಕಥೆ ‘ಬಲಿಪೆ’, ಈ ಬಗ್ಗೆ ಚಿತ್ರ ನಟಿ ಹೇಳಿದ್ದೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್: ತುಳುನಾಡಿನ ದೈವದೇವರ ಕಥೆಯ ಜೊತೆಗೆ ಎಂಡೋ ಸಂತ್ರಸ್ತರ ವ್ಯಥೆಗಳನ್ನೊಳಗೊಂಡ ತ್ರಿಲ್ಲರ್, ಹಾರರ್ ಸ್ಪರ್ಶವಿರುವ ಸಿನಿಮಾ ‘ಬಲಿಪೆ’ ತುಳು ಚಲನಚಿತ್ರ ಈಗಾಗಲೇ ಕರಾವಳಿಯ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ.

ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆ ಸಿನಿಮಾದ ನಟಿ ಅಂಕಿತಾ ಪಟ್ಲ ಮಾತನಾಡಿ,”ಸಿನಿಮಾ ಶೂಟ್ ಆಗಿ ವರ್ಷವೇ ಕಳೆದಿದ್ದ ಕಾರಣ ನನಗೆ ಸಿನಿಮಾ ಬಿಡುಗಡೆಯ ಬಗ್ಗೆ ನಿರೀಕ್ಷೆ ಇರಲಿಲ್ಲ. ಆದರೆ, ಕಥೆ, ನಿರ್ದೇಶನ,ಪಾತ್ರಗಳು ಆಧಾರದಲ್ಲಿ ಈ ಸಿನಿಮಾ ಪ್ರದರ್ಶನಗೊಂಡರೆ ಉತ್ತಮ ಪ್ರತಿಕ್ರಿಯೆ ದೊರೆಯುವ ಆಸೆ ಇತ್ತು, ಈಗ ಅದು ನಿಜವಾಗಿದೆ. ನಿರ್ಮಾಪಕರು ಈ ತುಳು ಸಿನಿಮಾ ಬಿಡುಗಡೆಗೆ ಬಹಳ ಕಷ್ಟಪಟ್ಟಿದ್ದಾರೆ, ದೇವರ ಆಶಿರ್ವಾದದಿಂದ ಈಗ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ನಮ್ಮ ಟೀಮ್ ಪಟ್ಟ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ. ತುಳುನಾಡ ಜನರ ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು” ಎಂದಿದ್ದಾರೆ.

ಈ ಬಗ್ಗೆ ಮಾಜಿ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಮಾತನಾಡಿ, ಹೆಚ್ಚಿನ ಚಲನಚಿತ್ರ ಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಬುಕ್ ಮೈ ಶೋನಲ್ಲಿ 9.7 ರೇಟಿಂಗ್ ಸಿಕ್ಕಿದೆ. ಉಡುಪಿಯ ಒಟ್ಟು ಐದು ಚಿತ್ರಮಂದಿರಗಳಲ್ಲಿ ಈ ಸಿನೆಮಾ ಪ್ರದರ್ಶನ ಕಾಣುತ್ತಿದೆ ಎಂದು ಹೇಳಿದರು. ಮಂಗಳೂರು, ಸುರತ್ಕಲ್, ಪಡುಬಿದ್ರೆ, ಪುತ್ತೂರು, ಬೆಳ್ತಂಗಡಿ,ಉಡುಪಿ ಮತ್ತು ಮಣಿಪಾಲ ಚಿತ್ರಮಂದಿರಗಳಲ್ಲಿ ಬಲಿಪೆ ಪ್ರದರ್ಶನ ಕಾಣುತ್ತಿದ್ದು, ಈ ತುಳು ಚಿತ್ರಕ್ಕೆ ಬುಕ್ ಮೈ ಶೋ ೯.೭ ರೇಟಿಂಗ್ ನೀಡಿದೆ. ನಾಯಕ ನಟನಾಗಿ ಹರ್ಷಿತ್ ಬಂಗೇರ, ನಾಯಕಿಯಾಗಿ ಅಂಕಿತಾ ಪಟ್ಲ ನಟನೆಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿದ್ದು, ನಿರ್ಮಾಪಕ ಹೇಮಂತ್ ಸುವರ್ಣ, ನಿರ್ದೇಶಕ ಪ್ರಸಾದ್ ಪೂಜಾರಿ, ಕಲಾವತಿ ದಯಾನಂದ್, ಡಾ.ಆಕಾಶ್‌ರಾಜ್ ಜೈನ್, ರವಿ ಪೂಜಾರಿ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

Click 👇

https://newsnotout.com/2024/05/panjurli-kannada-news-v-udupi
https://newsnotout.com/2024/05/prajwal-revanna-and-airport-kannada-news
https://newsnotout.com/2024/05/collage-festival-and-issues-jai-shri-ram

Related posts

ಕಸದ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ 2 ಮಹಿಳೆಯರು ಸಾವು..! ಲಾರಿ ಚಾಲಕ ಪೊಲೀಸರ ವಶಕ್ಕೆ

ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಇಬ್ಬರು ಪಿಎಫ್ಐ ಮುಖಂಡರಿಗಾಗಿ ಹುಡುಕಾಟ

ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದವನನ್ನು ಕೊಂದು ಮರಕ್ಕೆ ನೇತು ಹಾಕಿದ ಮಹಿಳೆ..! ಮರಣೋತ್ತರ ವರದಿ ಬಿಚ್ಚಿಟ್ಟ ರಹಸ್ಯವೇನು..?