Latestಕ್ರೈಂವಿಡಿಯೋವೈರಲ್ ನ್ಯೂಸ್

ದೈವದ ವೇಷ ಹಾಕಿ ವೇದಿಕೆ ಮೇಲೆ ಯುವಕನ ಹುಚ್ಚಾಟ..! ತುಳುನಾಡಿನ ದೈವಾರಾಧನೆಗೆ ಪದೇ-ಪದೇ ಅಪಮಾನ..! ವಿಡಿಯೋ ವೈರಲ್

1.1k
Spread the love

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಮನೋರಂಜನೆಗಾಗಿ ಜನ ರೀಲ್ಸ್‌ ಹಾಗೂ ವೇದಿಕೆಯ ಮೇಲೆ ದೈವವನ್ನು, ದೈವಾರಾಧನೆ ಕಲೆಯನ್ನು ಅಣಕಿಸುವವರ ಸಂಖ್ಯೆ ಹೆಚ್ಚಾಗಿದೆ. ಒಂದಷ್ಟು ಸಂಘಟನೆಗಳು ನಮ್ಮ ದೈವವನ್ನು ಅನುಕರಣೆ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ  ಧಾರ್ಮಿಕ ಭಾವನೆಗೆ ಧಕ್ಕೆ ತರುವ ಘಟನೆಗಳು ಮತ್ತೆ ಮರುಕಳಿಸಿದ್ದು, ಅಂತಹ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ.

ಯಾವುದೋ ಕಾರ್ಯಕ್ರಮದಲ್ಲಿ ದೈವದ ವೇಷ ಹಾಕಿ ವೇದಿಕೆಯ ಮೇಲೆ ದೈವಕೋಲದ ಅನುಕರಣೆ ಮಾಡುವ ಮೂಲಕ ಯುವಕರಿಬ್ಬರು ತುಳುನಾಡಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಆದರೆ ಇದು ಎಲ್ಲಿ ನಡೆದದ್ದು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಈ ಕುರಿತ ವಿಡಿಯೋವನ್ನು vijeshetty ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, “ದಯವಿಟ್ಟು ದೇವರ ಹೆಸರಲ್ಲಿ ಈ ಅಸಂಬದ್ಧತೆಗಳನ್ನು ಮಾಡುವುದನ್ನು ನಿಲ್ಲಿಸಿ, ದೈವಾರಾಧನೆ ತುಳುನಾಡಿನ ಒಂದು ನಂಬಿಕೆ ಮತ್ತು ಒಂದು ಪವಿತ್ರ ಆಚರಣೆಯಾಗಿದೆ. ಇದಕ್ಕೆ ಅಪಮಾನ ಮಾಡದಿರಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಮಾರ್ಚ್‌ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿನ ಯುವಕರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

See also  ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್..! ಯಾವುದು ಆ ಸಿನಿಮಾ..?
  Ad Widget   Ad Widget   Ad Widget   Ad Widget   Ad Widget   Ad Widget