ಕ್ರೈಂರಾಜಕೀಯ

ಮನೆ ಮುಂದಿರುವ ತುಳಸಿ ಕಟ್ಟೆಗಳು ಶಿಲುಬೆಗಳಾಗಿ ಬದಲಾಗುತ್ತಿವೆ ಎಂದದ್ದೇಕೆ ಬಿವೈ ರಾಘವೇಂದ್ರ..? ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆಗೆ ಸಂಸದರ ಆಕ್ರೋಶ!

305

ನ್ಯೂಸ್‌ ನಾಟೌಟ್‌: ನಮ್ಮ ಮನೆ ಮುಂಭಾಗ ಇರುವ ತುಳಸಿ ಕಟ್ಟೆಗಳು ಶಿಲುಬೆಗಳಾಗಿ ಪರಿವರ್ತನೆಯಾಗುತ್ತವೆ. ಯಾರೇ ಯಾವ ಧರ್ಮಕ್ಕೆ ಹೋದರೂ ನಮ್ಮ ವೈಯಕ್ತಿಕ ವಿರೋಧ ಇಲ್ಲ.‌ ಆದರೆ, ಬಲವಂತವಾಗಿ ಮತಾಂತರ ಮಾಡೋದನ್ನ ವಿರೋಧಿಸಿ ನಮ್ಮ ಸರ್ಕಾರ ಆ ಕಾಯ್ದೆ ತಂದಿತ್ತು ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.

ಶಿಕಾರಿಪುರದಲ್ಲಿ ಗೋಮಾಂಸ ವಿಚಾರವಾಗಿ ಎರಡು ಕೋಮುಗಳ ನಡುವಿನ ಗಲಾಟೆ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ದೇಶದಲ್ಲಿ ತಮ್ಮ ಧರ್ಮದ ಹಬ್ಬಗಳ ಆಚರಣೆಗೆ ಎಲ್ಲರೂ ಸ್ವತಂತ್ರರು. ನಮ್ಮ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ನಿನ್ನೆ ಶಿರಾಳಕೊಪ್ಪ ಸಮೀಪದ ಪುಣೇದಹಳ್ಳಿ ಬಳಿ ಗೋಮಾಂಸ ಸಿಕ್ಕಿದೆ. ಒಂದು ಆಟೋದಲ್ಲಿ 2-3 ಕ್ವಿಂಟಾಲ್ ಗೋ ಮಾಂಸ ಸಿಕ್ಕಿದೆ. ಪೊಲೀಸರು ಅದನ್ನ ಸೀಜ್ ಮಾಡಿ, ಠಾಣೆಗೆ ತಂದಿದ್ದಾರೆ ಎಂದರು.

ಗೋ ಮಾಂಸದ ಬಗ್ಗೆ ಮಾಹಿತಿ ನೀಡಿದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಅವಾಚ್ಯ ಶಬ್ಧಗಳಿಂದ ದೂಷಿಸುವ ಕೆಲಸ ಮಾಡಿದ್ದಾರೆ. ಗೋಮಾಂಸ ತಂದವರ ವಿರುದ್ದ ಕ್ರಮಕೈಗೊಳ್ಳಬೇಕು.‌ ಠಾಣೆಯ ಮುಂದೆ ಹಲ್ಲೆ ಮಾಡಲು ಯತ್ನಿಸಿದವರ ಮೇಲೆ ಕ್ರಮ ಆಗಬೇಕು. ಜೊತೆಗೆ ಈ ಘಟನೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳ ಮೇಲೆ ತ್ವರಿತ ಕ್ರಮ ತೆಗೆದುಕೊಳ್ಳಬೇಕು. ಕಾನೂನು ಎಲ್ಲರಿಗೂ ಒಂದೇ. ಎಲ್ಲರೂ ಗೌರವ ಕೊಡಬೇಕು.

ಪೊಲೀಸರ ಸಮ್ಮುಖದಲ್ಲೇ ಹಲ್ಲೆ ಮಾಡೋ ಪ್ರಯತ್ನ ಸರಿಯಲ್ಲ ಎಂದು ಹೇಳಿದರು. ನಮ್ಮ ಮನೆ ಮುಂಭಾಗ ಇರುವ ತುಳಸಿ ಕಟ್ಟೆಗಳು ಶಿಲುಬೆಗಳಾಗಿ ಪರಿವರ್ತನೆಯಾಗ್ತಿದೆ. ಯಾರೇ ಯಾವ ಧರ್ಮಕ್ಕೆ ಹೋದರೂ ನಮ್ಮ ವೈಯಕ್ತಿಕ ವಿರೋಧ ಇಲ್ಲ.‌ ಆದರೆ, ಬಲವಂತವಾಗಿ ಮಾಡೋದನ್ನ ವಿರೋಧಿಸಿ, ನಮ್ಮ ಸರ್ಕಾರ ಕಾಯ್ದೆ ತಂದಿತ್ತು.‌ ಅದನ್ನು ಕೂಡ ವೋಟಿಗಾಗಿ ಮರು ಪರಿಶೀಲನೆ ಮಾಡಲು ನಿರ್ಧಾರ ಮಾಡ್ತಿದ್ದಾರೆ.‌ ಇದಕ್ಕೆಲ್ಲಾ ಉತ್ತರ ತೆತ್ತುವ ದಿನ ಬಹಳ ದೂರ ಇಲ್ಲ ಎಂದು ಅವರು ಆಕ್ರೋಶಗೊಂಡು ಹೇಳಿಕೆ ನೀಡಿದ್ದಾರೆ.

See also  ಮಡಿಕೇರಿ:ಸಾಜಿದ್ ಗೆ ಚಾಕುವಿನಿಂದ ಇರಿದ ಶ್ರೀನಿಧಿ..! ಚಿಕಿತ್ಸೆ ಫಲಿಸದೆ ಯುವಕ ಮೃತ್ಯು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget