Latestದೇಶ-ವಿದೇಶವೈರಲ್ ನ್ಯೂಸ್

80 ದೇಶಗಳು ಭಾರತದಿಂದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿವೆ..!ಇಸ್ಲಾಂ ರಾಷ್ಟ್ರಗಳಿಂದಲೂ ಬೇಡಿಕೆ..!

845

ನ್ಯೂಸ್‌ ನಾಟೌಟ್: ಭಾರತದಲ್ಲಿ ತುಳಸಿ ಹಾಗೂ ಅದರ ಎಲೆಗಳಿಗೆ ಒಂದು ಧಾರ್ಮಿಕ ಮತ್ತು ಔಷಧೀಯ ಮಹತ್ವ ಇದೆ. ವಿಶ್ವದ ಸುಮಾರು 80 ರಾಷ್ಟ್ರಗಳು ಭಾರತದಿಂದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಆಶ್ಚರ್ಯವೆಂದರೆ ಇದರಲ್ಲಿ ಇಸ್ಲಾಂ ರಾಷ್ಟ್ರಗಳು ಕೂಡ ಸೇರಿವೆ. ಅದರಲ್ಲಿ ಪ್ರಮುಖವಾದ ದೇಶಗಳು ಅಂದ್ರೆ ಅಮೆರಿಕಾ, ಜರ್ಮನ್​, ಸ್ಪೇನ್, ಬಾಂಗ್ಲಾದೇಶ, ಇರಾಕ್, ಆಸ್ಟ್ರೇಲಿಯಾ, ರೋಮಾನಿಯಾ, ರಷ್ಯಾ, ನೆದರ್ ​ಲ್ಯಾಂಡ್​ ಮತ್ತು ಸಿಂಗಾಪುರ್.

ಇಷ್ಟು ದೇಶಗಳಲ್ಲಿ ಅತಿಹೆಚ್ಚು ತುಳಸಿ ಎಲೆಗಳನ್ನು ಖರೀದಿ ಮಾಡುತ್ತಿರುವ ರಾಷ್ಟ್ರ ಅಂದ್ರೆ ಅದು ಅಮೆರಿಕಾ. 80 ರಾಷ್ಟ್ರಗಳಲ್ಲಿಯೇ ಅಮೆರಿಕಾ ಅತಿಹೆಚ್ಚು ತುಳಸಿ ದಳಗಳನ್ನು ಖರೀದಿ ಮಾಡುತ್ತಿದೆ.

ಭಾರತದಿಂದ ವಿದೇಶಗಳು ಈ ಪ್ರಮಾಣದಲ್ಲಿ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದರ ಹಿಂದೆ ಅನೇಕ ಕಾರಣಗಳು ಇವೆ. ಅದರಲ್ಲಿ ಪ್ರಮುಖವಾಗಿ ಔಷಧಿ ತಯಾರಿಕೆಯಲ್ಲಿ ತುಳಸಿ ಉಪಯೋಗಿಸಲು ಮತ್ತು ಚಹಾದಲ್ಲಿ ತುಳಸಿ ಬಳಕೆ ಮಾಡಿಕೊಳ್ಳಲು ಇಷ್ಟೊಂದು ಪ್ರಮಾಣದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಕೇವಲ ಔಷಧ ಮತ್ತು ಚಹಾ ತಯಾರಿಕೆಗೆ ಮಾತ್ರವಲ್ಲ ಕಾಸ್ಮೆಟಿಕ್ ಉತ್ಪಾದನೆಯಲ್ಲೂ ಈಗ ತುಳಸಿಯನ್ನು ಬಳಸಲಾಗುತ್ತಿದೆ. ಅನೇಕ ಕಂಪನಿಗಳು ತುಳಸಿಯನ್ನು ಬಳಸಿಕೊಂಡು ಸೌಂದರ್ಯವರ್ಧಕ ಉತ್ಪನ್ನಗಳನ್ನು ಉತ್ಪಾದಿಸುತ್ತಿವೆ. ಹೀಗಾಗಿ ವಿದೇಶಗಳಲ್ಲಿ ತುಳಸಿ ಎಲೆಗಳ ಬೇಡಿಕೆ ವಿಪರೀತವಾಗಿದೆ. ಪರ್ಫ್ಯೂಮ್​ನಲ್ಲಿಯೂ ಕೂಡ ತುಳಸಿಯ ಎಣ್ಣೆಯನ್ನು ಉಪಯೋಗಿಸಲು ಆರಂಭಿಸುತ್ತಿದ್ದಾರೆ.ಇನ್ನು ಅನೇಕ ವಿದೇಶಿ ಕಂಪನಿಳು ನೈಸರ್ಗಿಕ ಕೀಟ ನಾಶಕಗಳನ್ನು ಉತ್ಪಾದನೆ ಮಾಡುತ್ತಿದ್ದು. ಅವುಗಳ ತಯಾರಿಕೆಗೂ ಕೂಡ ಈ ತುಳಸಿಯನ್ನು ಉಪಯೋಗಿಸಲು ಆರಂಭಿಸಿದ್ದಾರೆ.

 

See also  ಜೈಲಿನೊಳಗೆ ದರ್ಶನ್ ನ ಬಿಂದಾಸ್ ಲೈಫ್ ನ ವಿಡಿಯೋ, ಫೋಟೋ ವೈರಲ್ ಬೆನ್ನಲ್ಲೇ ಅಧಿಕಾರಿಗಳಿಗೆ ಶಾಕ್..! 7 ಮಂದಿಯನ್ನು ಅಮಾನತ್ತು ಮಾಡಿದ್ದೇವೆ ಎಂದ ಗೃಹ ಸಚಿವ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget