ಕ್ರೈಂ

ಗುದದ್ವಾರದೊಳಗೆ ಚಿನ್ನ ಬಚ್ಚಿಟ್ಟು ಸಾಗಾಟಕ್ಕೆ ಯತ್ನ

683

ನ್ಯೂಸ್ ನಾಟೌಟ್: ಗುದದ್ವಾರದೊಳಗೆ ಚಿನ್ನ ಬಚ್ಚಿಟ್ಟು ಸಾಗಾಟಕ್ಕೆ ಯತ್ನ ನಡೆಸಿದ ಆರೋಪಿಯನ್ನು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಆರೋಪಿ ಸರಿ ಸುಮಾರು 37 ಲಕ್ಷ ರೂ‌. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿರುವ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ಪ್ರದೇಶದ ಪ್ರಯಾಣಿಕ ಮೇ‌ 16ರಂದು ಬಹೆರೈನ್ ನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾನೆ. ಈತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಅನುಮಾನಗೊಂಡ ಅವರು ಪರಿಶೀಲನೆ ನಡೆಸಿದ್ದಾರೆ. ಆಗ ಈತ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಪರಿವರ್ತಿಸಿ ಗುದದ್ವಾರದಲ್ಲಿ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬಯಲಾಗಿದೆ. ಆರೋಪಿ ಪ್ರಯಾಣಿಕನಿಂದ 24 ಕ್ಯಾರೆಟ್ ನ 736ಗ್ರಾಂ ತೂಕದ 37,16,800 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

See also  ನನ್ನ ಸಹಿಯನ್ನೇ ತಿರುಚಿ, ಭ್ರಷ್ಟಾಚಾರ ಆರೋಪ ಮಾಡಲಾಗುತ್ತಿದೆ ಎಂದ ಹೆಚ್.ಡಿ.ಕೆ..! ಒಂದು ದಿನವಾದ್ರೂ ನನ್ನನ್ನು ಜೈಲಿಗೆ ಹಾಕುವ ಪ್ಲ್ಯಾನ್‌ ಎಂದ ಕುಮಾರಸ್ವಾಮಿ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget