Latestದೇಶ-ವಿದೇಶವಾಣಿಜ್ಯವೈರಲ್ ನ್ಯೂಸ್

ಟ್ರಂಪ್ ಸುಂಕಕ್ಕೆ ಜಾಗತಿಕ ಷೇರು ಮಾರುಕಟ್ಟೆ ಪತನ..! ಕೋವಿಡ್ ಸಾಂಕ್ರಾಮಿಕದ ಕುಸಿತದ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಆಘಾತ..!

427

ನ್ಯೂಸ್ ನಾಟೌಟ್: ವಿಶ್ವದ ಎಲ್ಲ ದೇಶಗಳಿಂದ ಆಗುವ ಆಮದು ಸರಕುಗಳ ಮೇಲೆ ಟ್ರಂಪ್ ಬುಧವಾರ(ಎ.2) ಭಾರಿ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿಯೂ ಷೇರು ಮಾರುಕಟ್ಟೆಯಲ್ಲಿ ವಿಪರೀತ ಏರಿಳಿತ ಕಂಡಿದೆ.

ಯೂರೋಪಿಯನ್ ಮತ್ತು ಏಷ್ಯನ್ ಮಾರುಕಟ್ಟೆಗಳಿಗಿಂತಲೂ ಅಧಿಕವಾಗಿ ಎಸ್ & ಪಿ ಶೇಕಡ 4.8ರಷ್ಟು ಕುಸಿತ ದಾಖಲಿಸಿದೆ. 2020ರ ಕೋವಿಡ್ ಸಾಂಕ್ರಾಮಿಕದ ಅವಧಿಯ ಕುಸಿತದ ಬಳಿಕ ಇದೇ ಮೊದಲ ಬಾರಿಗೆ ಭಾರಿ ಕುಸಿತ ಕಂಡುಬಂದಿದೆ. ಡೋ ಜೋನ್ಸ್ ಕೈಗಾರಿಕಾ ಸರಾಸರಿ 1679 ಪಾಯಿಂಟ್ ಗಳಷ್ಟು ಅಂದರೆ ಶೇಕಡ 4ರಷ್ಟು ಕುಸಿತ ಕಂಡಿದೆ. ನಾಸ್ಡಾಕ್ ಕಾಂಪೋಸಿಟ್ ಶೇಕಡ 6ರಷ್ಟು ಕುಸಿತ ದಾಖಲಿಸಿದೆ.

ಇದು ಆರ್ಥಿಕ ಪ್ರಗತಿಯ ಕುಂಠಿತಕ್ಕೆ ಕಾರಣವಾಗಲಿದೆ ಮತ್ತು ಸುಂಕದ ಕಾರಣದಿಂದ ಹಣದುಬ್ಬರ ಮತ್ತಷ್ಟು ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೃಹತ್ ತಂತ್ರಜ್ಞಾನ ಉದ್ಯಮದ ಷೇರುಗಳಿಂದ ಹಿಡಿದು ಕಚ್ಚಾ ತೈಲ ಕಂಪನಿಗಳ ವರೆಗಿನ ಎಲ್ಲ ಷೇರುಗಳು ಪತನಗೊಂಡಿವೆ. ಇತರ ಕರೆನ್ಸಿಗಳ ಎದುರು ಅಮೆರಿಕ ಡಾಲರ್ ಗಳ ಮೌಲ್ಯದಲ್ಲೂ ವ್ಯತ್ಯಯ ಕಂಡುಬಂದಿದೆ. ಸುರಕ್ಷಿತ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಲಾದ ಚಿನ್ನದ ಬೆಲೆ ಕೂಡಾ ಗುರುವಾರ ಕುಸಿದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಅಮೆರಿಕದ ಸಣ್ಣ ಕಂಪನಿಗಳು ಭಾರೀ ಆಘಾತ ಅನುಭವಿಸಿದ್ದು, ಸಣ್ಣ ಷೇರುಗಳ ರಸೆಲ್ ಸೂಚ್ಯಂಕ 2000 ಪಾಯಿಂಟ್ ಗಳಷ್ಟು ಅಂದರೆ ಶೇಕಡ 6.6ರಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ‘ಎಐ ಘಿಬ್ಲಿ’ಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ..! ಗೌಪತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತಜ್ಞರು..!

6 ತಿಂಗಳ ಕಂದನನ್ನು ಹಿಡಿದು ಅಗ್ನಿ ಕುಂಡ ತುಳಿಯುವಾಗ ಜಾರಿ ಬಿದ್ದ ತಂದೆ..! ವಿಡಿಯೋ ವೈರಲ್

See also  ಕುಂಬಕೋಡು: ಕಾರು ಮತ್ತು ಬೈಕ್ ನಡುವೆ ಅಪಘಾತ..! ಬೈಕ್ ಸವಾರನಿಗೆ ಗಾಯ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget