Latestಕ್ರೈಂವೈರಲ್ ನ್ಯೂಸ್

ತ್ರಿಬಲ್‌ ರೈಡಿಂಗ್‌ ವೇಳೆಯೇ ಯುವಕ-ಯುವತಿ ಕಿಸ್ಸಿಂಗ್..! ಪ್ರಶ್ನಿಸಿದ ಸವಾರನಿಗೆ ಯುವಕರಿಂದ ಧಮ್ಕಿ..!

890
Spread the love

ನ್ಯೂಸ್ ನಾಟೌಟ್ : ಇಬ್ಬರು ಯುವಕರು ಹಾಗೂ ಯುವತಿ ದ್ವಿಚಕ್ರ ವಾಹನದಲ್ಲಿ ತ್ರಿಬಲ್‌ ರೈಡಿಂಗ್‌ ಮಾಡುತ್ತಾ ಅಸಭ್ಯವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಬೆನ್ನಲ್ಲೇ ಬೆಂಗಳೂರು ಸಂಚಾರ ಪೊಲೀಸರು ಆ ದ್ವಿಚಕ್ರ ವಾಹನದ ಮಾಲೀಕನನ್ನು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ. ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ಫೆ.7ರಂದು ರಾತ್ರಿ ಈ ಘಟನೆ ನಡೆದಿತ್ತು, ಈಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರು ಹಾಗೂ ಒಬ್ಬ ಯುವತಿ ರಾಗಿಗುಡ್ಡ ಬಸ್‌ ನಿಲ್ದಾಣದ ಕಡೆಯಿಂದ ಮೆಟ್ರೋ ನಿಲ್ದಾಣದ ಕಡೆಗೆ ತ್ರಿಬಲ್‌ ರೈಡಿಂಗ್‌ ನಲ್ಲಿ ಹೊರಟ್ಟಿದ್ದರು. ಈ ವೇಳೆ ಒಬ್ಬ ಯುವಕ ದ್ವಿಚಕ್ರ ವಾಹನ ಚಲಾಯಿಸಿದರೆ, ಆತನ ಹಿಂದೆ ಕುಳಿತ್ತಿದ್ದ ಯುವಕ ಮತ್ತು ಯುವತಿ, ಬೈಕ್‌ ಚಾಲನೆ ವೇಳೆ ಪರಸ್ಪರ ಚುಂಬಿಸಿಕೊಂಡು ಅಸಭ್ಯವಾಗಿ ವರ್ತಿಸಿದ್ದರು.

ಈ ಹುಚ್ಚಾಟದ ದೃಶ್ಯವನ್ನು ಅವರ ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಅಲ್ಲದೆ, ಅದನ್ನು ಪ್ರಶ್ನಿಸಿದ ಆ ಸವಾರನಿಗೆ ಯುವಕರು ಧಮ್ಕಿ ಹಾಕಿದ್ದರು. ಈ ಬೆನ್ನಲ್ಲೇ ಸಂಚಾರ ಪೊಲೀಸರು ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕನನ್ನು ಪತ್ತೆಹಚ್ಚಿ ದಂಡ ವಸೂಲಿ ಮಾಡಿದ್ದಾರೆ.

See also  ಮಂಗಳೂರು: ಬ್ಯಾಂಕ್ ದರೋಡೆಯ ತನಿಖೆ ವೇಳೆ ನಕಲಿ ನಂಬರ್ ಪ್ಲೇಟ್ ಗಳ ದಂಧೆ ಬಯಲಿಗೆ..! ಸಿಸಿಟಿವಿ ಪರಿಶೀಲನೆ ವೇಳೆ ನಕಲಿ ನಂಬರ್ ಪ್ಲೇಟ್ ​ನ ಹತ್ತಾರು ವಾಹನಗಳು ಪತ್ತೆ..!
  Ad Widget   Ad Widget   Ad Widget