ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಹೆಂಡತಿ ವಿಧಿವಶಳಾದ ಬೆನ್ನಲ್ಲೇ ಅತ್ತೆಯನ್ನು ವರಿಸಿದ ಭೂಪ..! ಅತ್ತೆಯ ಗಂಡನ ಎದುರೇ ಮದುವೆ..! ಆಕೆಯ ಗಂಡ ಹೇಳಿದ್ದೇನು..?

ನ್ಯೂಸ್ ನಾಟೌಟ್: ಅತ್ತೆ ತಾಯಿಗೆ ಸಮಾನ ಅನ್ನೋರ ಮಧ್ಯೆ ಇಲ್ಲೊಬ್ಬ ಅತ್ತೆಯನ್ನೇ ಮದುವೆಯಾದ ವಿಚಿತ್ರ ಘಟನೆ ನಡೆದಿದೆ. ಹೆಂಡತಿಯ ತಾಯಿಯನ್ನು ಪ್ರೀತಿಸಿ ಗ್ರಾಮಸ್ಥರ ಮುಂದೆ ಮದುವೆ ಆಗಿರುವ ವಿಚಿತ್ರ ಪ್ರೇಮ ಕಥೆ ಇದಾಗಿದ್ದು, ಬಿಹಾರದ ಛತ್ರ ಪಾಲ್ ಪಂಚಾಯತ್‌ನ ಹೀರ್ ಮೋತಿ ಗಾಂವ್‌ನಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಹಾರದ ಸಿಕಂದರ್ ಯಾದವ್‌ಗೆ 45 ವರ್ಷ, ಎರಡು ಮಕ್ಕಳ ತಂದೆ. ಆತ ಪತ್ನಿ ಸಾಯುತ್ತಿದ್ದಂತೆಯೇ ಪತ್ನಿಯ ತಾಯಿಯೊಡನೆ ಪ್ರೀತಿಯಲ್ಲಿ ಬಿದ್ದಿದ್ದಾನೆ. 55 ವರ್ಷದ ತಾಯಿ ಗೀತಾದೇವಿ ಕೂಡಾ ಆತನ ಪ್ರೇಮಪಾಶಕ್ಕೆ ಸಿಲುಕಿದ್ದಾರೆ. ಗೀತಾದೇವಿಯ ಪತಿ ದಿಲೇಶ್ವರ ದರ್ವೆಗೆ ಇವರಿಬ್ಬರ ಸಂಬಂಧದ ಬಗ್ಗೆ ಅನುಮಾನ ಬಂದಿದೆ. ಅವರು ತನಿಖೆ ನಡೆಸಿದಾಗ ಈ ಜೋಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಗ್ರಾಮಸ್ಥರ ಎದುರು ಯಾದವ್ ತನ್ನ ಅತ್ತೆಯ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಆ ಬಳಿಕ ಎಲ್ಲರ ಒಪ್ಪಿಗೆಯ ಮೇರೆಗೆ ಯಾದವ್ ಇತರ ಗ್ರಾಮಸ್ಥರ ಸಮ್ಮುಖದಲ್ಲಿ ಅತ್ತೆಯ ತಲೆಗೆ ಸಿಂಧೂರವನ್ನು ಇಟ್ಟು ಮದುವೆಯಾಗಿದ್ದಾನೆ ಎನ್ನಲಾಗಿದೆ. ವಿಚಿತ್ರವೆಂಬಂತೆ ಗ್ರಾಮಸ್ಥರು ಇದಕ್ಕೆ ಮತ್ತಷ್ಟು ಹುರಿದುಂಬಿಸಿದ್ದಾರೆ. ಗ್ರಾಮಸ್ಥರ ಒಪ್ಪಿಗೆಯೊಂದಿಗೆ ಸಿಕಂದರನು ಗೀತಾದೇವಿಯನ್ನು ಎಲ್ಲರ ಸಮ್ಮುಖದಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಮಾಧ್ಯಮದೊಂದಿಗೆ ಆಕೆಯ ಗಂಡ ಮಾತನಾಡಿ ಮದುವೆಗೆ ಸಂತಸದಿಂದ ಒಪ್ಪಿಗೆ ನೀಡಿರುವುದಾಗಿ ಹೇಳಿದ್ದಾನೆ ಎಂದು ವರದಿ ತಿಳಿಸಿದೆ.

Related posts

ಚಲಿಸುತ್ತಿರುವ ಕಾರಿನಲ್ಲಿ ರೊಮ್ಯಾನ್ಸ್‌..! ಲಿಪ್‌ ಲಾಕ್‌ ವಿಡಿಯೋ ಎಲ್ಲೆಡೆ ವೈರಲ್

ವಿವಾಹಿತ ಮಹಿಳೆ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

ನಾಳೆ ದುಬೈನಲ್ಲಿ ನರ್ತಿಸಲಿರುವ ‘ಶಿವದೂತೆ ಗುಳಿಗೆ’!