ಕರಾವಳಿಕೊಡಗುಪುತ್ತೂರು

ಬೆಳ್ಳಂ ಬೆಳಗ್ಗೆ ಹಾಸ್ಟೆಲ್ ಗೆ ನುಗ್ಗಿ ಹುಡುಗಿಯರ ಜತೆ ಮಲಗಲೆತ್ನಿಸಿದ..! ಆ ಯುವಕನಿಗೆ ಮುಂದೆನಾಯ್ತು ಗೊತ್ತಾ..?

248

ನ್ಯೂಸ್ ನಾಟೌಟ್ :ವಿದ್ಯಾರ್ಥಿನಿಯರ ಹಾಸ್ಟೆಲ್ ವೊಂದಕ್ಕೆ ಬೆಳ್ಳಂ ಬೆಳಗ್ಗೆ ಯುವಕನೋರ್ವ ಪ್ರವೇಶಿಸಿ ಹುಡುಗಿಯರ ಜತೆ ಮಲಗಲು ಯತ್ನಿಸಿದ ಘಟನೆ ವರದಿಯಾಗಿದೆ.ಬುಡಕಟ್ಟು ಹುಡುಗಿಯರ ವಸತಿ ನಿಲಯದಲ್ಲಿ ಜೂನ್​ 15ರಂದು ಈ ಘಟನೆ ನಡೆದಿದ್ದು,ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅಖಿಲ್​ ಬಂಧಿತ ಆರೋಪಿ.


ಈ ಘಟನೆ ನಡೆದಿದ್ದು ಕೇರಳದ ತೋಡಪುಳ ಎಂಬಲ್ಲಿ.ಬೆಳಗ್ಗಿನ ವೇಳೆ ವಿದ್ಯಾರ್ಥಿನಿಯರ ಹಾಸ್ಟೆಲ್ ಒಳಗಿರುವ ವೇಳೆ ಯುವಕ​ ಯಾರಿಗೂ ತಿಳಿಯದಂತೆ ಒಳಗಡೆ ಪ್ರವೇಶ ಮಾಡಿ ಹುಡುಗಿಯರ ಜತೆ ಮಲಗಲು ಯತ್ನಿಸಿದ್ದಾನೆ.ಆತನನ್ನು ನೋಡಿದ ಹುಡುಗಿಯರು ಗಾಬರಿಗೆ ಒಳಗಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಇದರಿಂದ ಭಯಗೊಂಡ ಅಖಿಲ್​ ಅಲ್ಲಿಂದ ಪರಾರಿಯಾಗಿದ್ದ.ಬಂಧಿತ ಯುವಕನನ್ನು 23 ವರ್ಷದ ಅಖಿಲ್​ ಎಂದು ಗುರುತಿಸಲಾಗಿದೆ. ಈತ ಅರಕ್ಕುಲಂ ಗ್ರಾಮದ ನಿವಾಸಿಯಾಗಿದ್ದು, ವರದಿಗಳ ಪ್ರಕಾರ ಈತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಪ್ರಕರಣ ದಾಖಲಾದ ಬಳಿಕ ಸಿಸಿಟಿವಿ ದೃಶ್ಯಾವಳಿ ನೆರವಿನೊಂದಿಗೆ ಆರೋಪಿ ಅಖಿಲ್​ನನ್ನು ಕಂಜಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಖಿಲ್​ ಓರ್ವ ಬಸ್​ ಕ್ಲೀನರ್​ ಆಗಿ ಕೆಲಸ ಮಾಡುತ್ತಿದ್ದ ಪೂಮಲಾ-ಮುವಾಟ್ಟುಪುಳ ಮಾರ್ಗವಾಗಿ ಸಂಚರಿಸುವ ಬಸ್‌ನ ಕ್ಲೀನರ್ ಎಂದು ತಿಳಿದು ಬಂದಿದೆ.

See also  ಪುತ್ತೂರು: ತಹಶೀಲ್ದಾರ್ ಅಜಿತ್ ರೈ ಬಂಧನ..! 100 ಎಕರೆಗೂ ಅಧಿಕ ಆಸ್ತಿ ಪತ್ರಗಳು ಲೋಕಾಯುಕ್ತ ಪೊಲೀಸರ ವಶಕ್ಕೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget