ವೈರಲ್ ನ್ಯೂಸ್

‘ನನಗೆ ಮಾತ್ರವಲ್ಲ ನನ್ನೊಂದಿಗಿದ್ದ ಮೇಕೆಗೂ ಟಿಕೇಟ್ ಖರೀದಿಸಿದ್ದೇನೆ’,ವೃದ್ದೆಯ ಹೃದಯಸ್ಪರ್ಶಿ ವಿಡಿಯೋಗೆ ನೆಟ್ಟಿಗರು ಹೇಳಿದ್ದೇನು?

182

ನ್ಯೂಸ್ ನಾಟೌಟ್ : ಮಹಿಳೆಯೊಬ್ಬಳು ತನ್ನ ಮೇಕೆಯೊಂದಿಗೆ (Goat) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ.ವಿಡಿಯೋದಲ್ಲಿ ಆಕೆಯ ಪ್ರಾಮಾಣಿಕತೆ ಹಾಗೂ ಮುಗ್ಧತೆಗೆ ಜನ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.ನಮ್ಮ ದೇಶಕ್ಕೆ ಇಂಥ ಪ್ರಾಮಾಣಿಕ ನಾಯಕರು ಬೇಕು ಎನ್ನುತ್ತಿದ್ದಾರೆ.

ರೈಲಿನಲ್ಲಿ ಪ್ರಯಾಣಿಸೋ ವೇಳೆ ಅಲ್ಲಿಗೆ ಬಂದ ಟಿಕೆಟ್​ ಪರಿವೀಕ್ಷಕರು ​ಮೇಕೆಗೂ ಟಿಕೆಟ್​ ಖರೀದಿಸಿದ್ದೀರಾ? ಎಂದು ಕೇಳುತ್ತಾರೆ. ಆಕೆ ನಗುತ್ತಲೇ ಅದಕ್ಕೆ ಉತ್ತರ ನೀಡುತ್ತಾಳೆ. ಆತ್ಮವಿಶ್ವಾಸದಿಂದ ಮತ್ತು ಹೆಮ್ಮೆಯಿಂದ ಹೌದು, ಮೇಕೆಗೂ ಟಿಕೆಟ್​​ ಖರೀದಿಸಿದ್ದೇನೆ ಎಂದು ಹೇಳುತ್ತಾಳೆ. ಸದ್ಯ ಈ ವಿಡಿಯೋ ನೋಡಿ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಅಂದ ಹಾಗೆ ಬೆಂಗಾಲಿಯಲ್ಲಿ ನಡೆದ ಈ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ  ಸಿಕ್ಕಾಪಟ್ಟೆ ವೈರಲ್  ಆಗುತ್ತಿದ್ದು ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತಿದೆ. ಪಶ್ಚಿಮ ಬಂಗಾಳದ (West Bengal) ರೈಲಿನಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದೆ. ನೆಟ್ಟಿಗರು ಹೃದಯಸ್ಪರ್ಶಿ ವಿಡಿಯೋಗೆ ಪ್ರತಿಕ್ರಿಯಿಸಿ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

X ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಐಎಎಸ್ ಅಧಿಕಾರಿ ಅವನೀಶ್ ಶರಣ ಅವರು ‘ಈಕೆ ತನ್ನ ಮೇಕೆಗೂ ರೈಲು ಟಿಕೆಟ್​ ಖರೀದಿಸಿದ್ದಾಳೆ, ಈ ವಿಷಯವನ್ನು ಟಿಕೆಟ್​ ಪರಿವೀಕ್ಷಕರಿಗೆ ಹೆಮ್ಮೆಯಿಂದ  ಹೇಳುವಾಗ ಆಕೆಯ ಮುಖದಲ್ಲಿ ಅರಳಿದ ನಗುವನ್ನು ನೋಡಿ, ಅದ್ಭುತವಾಗಿದೆಯಲ್ಲ’ ಎಂದು ಬಣ್ಣಿಸಿದ್ದಾರೆ.

ಇಂದು ಬೆಳಗ್ಗಿನ ವೇಳೆ (ಸೆ.೦೬) ಹಂಚಿಕೊಂಡ ಈ ವಿಡಿಯೋ ಅನ್ನು ಈ ತನಕ ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಸಾವಿರಾರು ಜನರು ಲೈಕ್ ಮಾಡಿದ್ದಾರೆ. ಅವಳ ನಗುವೇ ಅವಳ ಮನಸ್ಸನ್ನು ಹೇಳುತ್ತಿದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ನಮ್ಮ ದೇಶಕ್ಕೆ ಇಂಥ ಪ್ರಾಮಾಣಿಕ ಜನರು ಬೇಕು ಎಂದಿದ್ದಾರೆ ಇನ್ನೊಬ್ಬರು.ಇಂತಹ ಮಹಿಳೆಯರಿದ್ದರೆ ಇನ್ನೇನು ಬೇಕು ಹೇಳಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಈ ಅಜ್ಜಿಯ ಸರಳತನ ಹೃದಯಕ್ಕೆ ಇಡೀ ಜಗತ್ತೆ ಮಾರುಹೋಗಿದೆ. ಇವಳೇ ನಾಯಕಿ! ಇಂಥ ಸ್ತ್ರೀವಾದಿ ನಮಗೆ ಬೇಕು, ಆಕೆ ಹೇಗಿದ್ದರೂ ಏನು ಕೆಲಸ ಮಾಡಿಕೊಂಡಿದ್ದರೂ ಸರಿ ಎಂದಿದ್ದಾರೆ ಇನ್ನೊಬ್ಬರು. ಟಿಕೆಟ್​ ಇಲ್ಲದೆಯೇ ಮುಂಬೈ ಸೇರಿದ ಅನೇಕ ಹೆಣ್ಣುಮಕ್ಕಳು ಇಂದು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

See also  ರಾತ್ರಿ ದೂರದಲ್ಲಿ ಗುಂಡಿ ಅಗೆಯುವುದು ಕಂಡು ಓಡಿದ ಗಸ್ತು ತಿರುಗಾಟದ ಪೊಲೀಸರು..! ಹತ್ತಿರ ಬಂದ ಪೊಲೀಸರಿಗೆ ಕಾದಿತ್ತು ಭಯಾನಕ ಶಾಕ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget